", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/222042-1751204335-Canva---2025-06-29T185732.693.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮಂಗಳೂರು: ಒಎಲ್ಎಕ್ಸ್ ಆ್ಯಪ್‌ನಲ್ಲಿ ಕಾರು ಮಾರಾಟ ಮಾಡುವ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಮಂಗಳೂರು...Read more" } ", "keywords": ""OLX car scam Mangalore, car sale fraud Mangalore, OLX online scam, Mangalore police case, car buyer cheated, OLX fraudster arrested, online marketplace scam, Mangalore news, car sale online fraud, ", "url": "https://dashboard.publicnext.com/node" }
ಮಂಗಳೂರು: ಒಎಲ್ಎಕ್ಸ್ ಆ್ಯಪ್‌ನಲ್ಲಿ ಕಾರು ಮಾರಾಟ ಮಾಡುವ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಮಂಗಳೂರು ಸೆನ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸೊರಬ ಮೂಲದ ರವಿಚಂದ್ರ ಮಂಜುನಾಥ ರೇವಣಕರ(29) ಬಂಧಿತ ಆರೋಪಿ. ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ರವಿಚಂದ್ರ ಮಂಜುನಾಥ ಎಂಬಾತ ಒಎಲ್ಎಕ್ಸ್ ಆ್ಯಪ್‌ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ 2,50,000ರೂ. ಹಣ ಪಡೆದು ವಂಚನೆಗೈದಿರುವ ಬಗ್ಗೆ ಜೂನ್ 28ರಂದು ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಹಿಂದೆ ಬಿದ್ದಿದ್ದಾರೆ, ಆಗ ಆತ ಹೊಸಪೇಟೆಯಲ್ಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ತಕ್ಷಣ ತನಿಖಾ ತಂಡ ಹೊಸಪೇಟೆಗೆ ಹೋಗಿ ಆರೋಪಿ ರವಿಚಂದ್ರ ಮಂಜುನಾಥ ರೇವಣಕರನನ್ನು ವಶಕ್ಕೆ ಪಡೆದು ಸೆನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದೆ.
ತನಿಖೆಯ ವೇಳೆ ಆರೋಪಿ ಒಟ್ಟು 21 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, 8 ಸಿಮ್ ಕಾರ್ಡ್‌ಗಳನ್ನು ಬಳಕೆ ಮಾಡಿರುವುದು ತಿಳಿದು ಬಂದಿದೆ. ಈ 8 ಮೊಬೈಲ್ ಸಂಖ್ಯೆಗಳ ಮೇಲೆ 80ಕ್ಕೂ ಅಧಿಕ ಸೈಬರ್ ವಂಚನೆ ದೂರು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಕಳೆದ 3 ವರ್ಷಗಳಿಂದ OLX APPನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತಾನು ಉಪಯೋಗಿಸುತ್ತಿದ್ದ ಮೊಬೈಲ್ ಅನ್ನು ಕೆಲವು ದಿನಗಳ ಮಟ್ಟಿಗೆ ಇಟ್ಟುಕೊಂಡು ಅದನ್ನು ಮಾರಾಟ ಮಾಡುತ್ತಿದ್ದ. ಬಳಿಕ ಹೊಸ ಸಿಮ್‍ಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
Kshetra Samachara
29/06/2025 07:09 pm