", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/405356-1751205403-upi.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶೃಂಗೇರಿ: ನಕಲಿ ಯುಪಿಐ ಪಾವತಿ ಮೂಲಕ ಮೆಡಿಕಲ್ ಮಾಲೀಕನಿಗೆ ವಂಚಿಸಿರುವ ಪ್ರಕರಣವೊಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಬೆಳಕಿಗೆ ಬಂ...Read more" } ", "keywords": "Sringeri, fake UPI scam, medical shop owner cheated, online fraud.", "url": "https://dashboard.publicnext.com/node" }
ಶೃಂಗೇರಿ: ನಕಲಿ ಯುಪಿಐ ಪಾವತಿ ಮೂಲಕ ಮೆಡಿಕಲ್ ಮಾಲೀಕನಿಗೆ ವಂಚಿಸಿರುವ ಪ್ರಕರಣವೊಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಪಟ್ಟಣದ ಸಂತೆ ಮಾರುಕಟ್ಟೆ ಸಮೀಪದ ಮೆಡಿಕಲ್ ಅಂಗಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ನಿನ್ನೆ ರಾತ್ರಿ 3,600 ರೂಪಾಯಿ ಮೌಲ್ಯದ ಔಷಧಿ ಮತ್ತು ಇತರ ವಸ್ತುಗಳನ್ನು ಖರೀದಿಸಿ, ನಕಲಿ ಯುಪಿಐ ಆಪ್ ಮೂಲಕ ಸ್ಕ್ಯಾನ್ ಮಾಡಿ ಟ್ರಾನ್ಸ್ಯಾಕ್ಷನ್ ಐಡಿ ತೋರಿಸಿ ಹಣ ಪಾವತಿಸಿದಂತೆ ನಂಬಿಸಿ ವಂಚನೆ ಎಸಗಿದ್ದಾರೆ. ಮೆಡಿಕಲ್ ಮಾಲೀಕರು ಹಣ ಖಾತೆಗೆ ಜಮಾ ಆಗಿಲ್ಲ ಎಂಬುದನ್ನು ಗಮನಿಸಿ, ಆ ವ್ಯಕ್ತಿಗಳನ್ನು ಮತ್ತೆ ಕರೆಯಲಾಗಿದೆ. ಆದರೆ ಅವರು ಮತ್ತೆ ಅದೇ ನಕಲಿ ಪಾವತಿ ಟ್ರಾನ್ಸ್ಯಾಕ್ಷನ್ ಐಡಿ ತೋರಿಸಿದ್ದಾರೆ. ಬಹುಶಃ ಹಣ ಖಾತೆಗೆ ಜಮವಾಗಿರಬಹುದೆಂದು ಸುಮ್ಮನಾದ ಮೆಡಿಕಲ್ ಮಾಲೀಕ ಇಂದು ಖಾತೆ ಪರಿಶೀಲನೆ ನಡೆಸಿದಾಗ ವಂಚಿಸಿರುವುದು ದೃಢಪಟ್ಟಿದೆ. ಇತ್ತೀಚಿಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ವ್ಯಾಪಾರಸ್ಥರು ಇಂತಹ ನಕಲಿ ಯುಪಿಐ ಪಾವತಿಗಳ ಬಗ್ಗೆ ಎಚ್ಚರದಿಂದಿರ ಬೇಕಿದೆ.
PublicNext
29/06/2025 07:26 pm