ಮಂಗಳೂರು: ಶಾಲೆಯ ಮೇಲ್ಛಾವಣಿ ಕುಸಿದು ಯುಕೆಜಿ ವಿದ್ಯಾರ್ಥಿಯೋರ್ವನು ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆ ಕೆಂಜಾರುವಿನಲ್ಲಿ ನಡೆದಿದೆ.
ಕೆಂಜಾರುವಿನ ಖಾಸಗಿ ಅನುದಾನಿತ ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯ ಶೋನಿತ್ ಗಾಯಗೊಂಡ ಯುಕೆಜಿ ವಿದ್ಯಾರ್ಥಿ.
ಸೋಮವಾರ ಜೋರಾಗಿ ಗಾಳಿ ಬೀಸಿದಾಗ ಏಕಾಏಕಿ ಮೇಲ್ಛಾವಣಿ ಕುಸಿದಿದೆ. ತರಗತಿ ನಡೆಯುತ್ತಿದ್ದಾಗಲೇ ಮೇಲ್ಛಾವಣಿ ಕುಸಿದ ಪರಿಣಾಮ ಶೋನಿತ್ ಎಂಬ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ. 21 ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿದ್ದರು. ಉಳಿದ ವಿದ್ಯಾರ್ಥಿಗಳು ಹೊರಗೆ ಓಡಿ ಬಂದಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ. ಗಾಯಾಳು ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಶಾಲೆಯ ಒಂದು ಪಾಶ್ವ ಸಂಪೂರ್ಣ ಕುಸಿತಗೊಂಡಿದೆ.
PublicNext
30/06/2025 10:33 pm