ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ನಾಳೆ ಜಿಲ್ಲೆಗೆ ಸಚಿವ ಶಿವರಾಜ್ ತಂಗಡಗಿ ಭೇಟಿ

ಚಿತ್ರದುರ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್ ತಂಗಡಗಿ ಜುಲೈ 8 ರಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಬೆಳಗ್ಗೆ 11:30ಕ್ಕೆ ಕೊಪ್ಪಳದ ಕಾರಟಗಿಯಿಂದ ರಸ್ತೆ ಮೂಲಕ ಪ್ರಯಾಣಿಸುವ ಅವರು, ಮಧ್ಯಾಹ್ನ 1:30ಕ್ಕೆ ಚಿತ್ರದುರ್ಗ ನಗರಕ್ಕೆ ಆಗಮಿಸುವರು. ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ನಿವಾಸದ ಹತ್ತಿರದ ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪನವರ ಮನೆಗೆ ಭೇಟಿ ನೀಡುವರು. ಬಳಿಕ ಮಧ್ಯಾಹ್ನ 3:30ಕ್ಕೆ ಸಿಬಾರ ಗ್ರಾಮದ ಬಳಿಯ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ವತಿಯಿಂದ ನಿರ್ವಹಣೆ ಮಾಡುತ್ತಿರುವ ಎಸ್.ನಿಜಲಿಂಗಪ್ಪನವರ ಸ್ಮಾರಕ ‘ಪುಣ್ಯ ಭೂಮಿ’ಗೆ ಭೇಟಿ ನೀಡುವರು.

ಸಂಜೆ 5 ಗಂಟಗೆ ರಸ್ತೆ ಮೂಲಕ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಪ್ರವಾಸ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ

Edited By : PublicNext Desk
PublicNext

PublicNext

07/07/2025 06:25 pm

Cinque Terre

10.42 K

Cinque Terre

0

ಸಂಬಂಧಿತ ಸುದ್ದಿ