ಮೊಳಕಾಲ್ಮುರು ಪೊಲೀಸ್ ಠಾಣೆಯಿಂದ ಸಿಇಐಆರ್ ತಂತ್ರಾಂಶದಲ್ಲಿ ದೂರು ದಾಖಲಾಗಿದ್ದ ಸುಮಾರು 3-50 ಲಕ್ಷ ಮೌಲ್ಯದ 20 ಮೊಬೈಲ್ ಫೋನ್‌ಗಳನ್ನು ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ನೇತೃತ್ವದಲ್ಲಿ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದರು.
ಸಿಇಐಆರ್ ಪೋರ್ಟಲ್ ಕೇಂದ್ರೀಯ ಸಲಕರಣೆಗಳ ಗುರುತಿನ ನೋಂದಣಿಯಲ್ಲಿ ದಾಖಲಾಗಿದ್ದ ಮೊಬೈಲ್ ಫೋನ್‌ಗಳ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ 20 ಮೊಬೈಲ್‌ಗಳನ್ನು ಪತ್ತೆ ಮಾಡಿ, ಪಟ್ಟಣದ ಪೊಲೀಸ್ ಠಾಣೆಗೆ ವಾರಸುದಾರರನ್ನು ಬರಮಾಡಿಕೊಂಡು, ಅವರವರ ಮೊಬೈಲ್ ಫೋನ್‌ಗಳನ್ನು ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಮತ್ತು ಸಿಪಿಐ ನಾಗರಾಜ್ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
PublicNext
02/05/2026 08:31 am
LOADING...