ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಲಕ್ಷಾಂತರ ಮೌಲ್ಯದ ಚಿನ್ನದ ಸರ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಚಳ್ಳಕೆರೆ: ಆಟೋ ಚಾಲಕರ ಮಾನವೀಯ ಗುಣಗಳು ಮತ್ತು ಅವರ ಪ್ರಾಮಾಣಿಕತೆಯ ಬಗ್ಗೆ ಆಗಾಗ ಸುದ್ದಿಗಳು ಆಗ್ತಾವೆ. ಅದೇ ರೀತಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿಂದು ನಡೆದ ಘಟನೆಯಲ್ಲಿ ಆಟೋಚಾಲಕನ ಪ್ರಾಮಾಣಿಕತೆಗೆ ಜನ ಭೇಷ್ ಎಂದಿದ್ದಾರೆ.

ಮಹದೇವಪುರದಿಂದ ಅನ್ಯ ಊರಿಗೆ ತೆರಳಲು ಬಂದಿದ್ದ ಗಂಡ- ಹೆಂಡತಿಯರಿಬ್ಬರೂ ಅಕಸ್ಮಾತ್‌ ಆಗಿ ಆಟೋದಲ್ಲಿ ಬ್ಯಾಗ್ ಬಿಟ್ಟು ನಾಯಕನಹಟ್ಟಿಯಲ್ಲಿ ಇಳಿದು ಹೋಗಿದ್ದರು. ಚಾಲಕ ತನ್ನ ಆಟೋವನ್ನು ತೊರೆಕೊಲಮ್ಮನಹಳ್ಳಿಗೆ ಚಲಾಯಿಸಿಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಆಟೋದಲ್ಲಿರುವ ಬ್ಯಾಗ್ ನೋಡಿ ವಾಪಸ್ ನಾಯಕನಹಟ್ಟಿಗೆ ಬಂದು ವಿಚಾರಿಸಿದ್ದಾರೆ.

ನಂತರ ನೇರವಾಗಿ ಬ್ಯಾಗ್ ನಲ್ಲಿದ್ದ ಸುಮಾರು 5 ತೊಲದ 7.50 ಲಕ್ಷ ರೂಪಾಯಿ ಬೆಲೆ ಬಾಳುವ ಮಾಂಗಲ್ಯ ಸರವಿದ್ದ ಬ್ಯಾಗ್ ಅನ್ನು ನಾಯಕನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ಪಿಎಸ್ ಐ ಪಾಂಡುರಂಗಪ್ಪ ಅವರ ಮೂಲಕ ಮಾಲೀಕರಾದ ಸರಸ್ವತಿ ಅವರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಬೇಡರೆಡ್ಡಿಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎಂಬ ಆಟೋ ಚಾಲಕನ ಪ್ರಾಮಾಣಿಕತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Edited By :
PublicNext

PublicNext

02/05/2026 07:38 am

Cinque Terre

11.78 K

Cinque Terre

0

ಸಂಬಂಧಿತ ಸುದ್ದಿ