ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಶೀಲ ಶಂಕಿಸಿ ಪತ್ನಿಗೆ ಮಚ್ಚಿನಿಂದ ಹಲ್ಲೆ - ಆರೋಪಿ ಅರೆಸ್ಟ್

ಚಿತ್ರದುರ್ಗ : ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಚನ್ನಮ್ಮನಹಳ್ಳಿ ತಾಂಡ. ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಗ್ರಾಮದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಅದೇನಂದ್ರೆ ಮನೆಯಲ್ಲಿ ಮಲಗಿದ್ದ ಪತ್ನಿಯ ಮೇಲೆ ಆಕೆಯ ಗಂಡನೇ ಮಚ್ಚಿನಿಂದ ಮನ ಬಂದಂತೆ ಹಲ್ಲೆ ಮಾಡಿದ್ದ. ಇದೇ ಊರಿನ ಲಕ್ಷ್ಮಿ ಎಂಬ ಮಹಿಳೆಯ ಮೇಲೆ ಆಕೆಯ ಪತಿರಾಯ ತಿಪ್ಪೇಸ್ವಾಮಿ ಕೊಲೆ ಮಾಡುವ ಯತ್ನ ಮಾಡಿದ್ದಾನೆ. ಊಟದ ವಿಚಾರಕ್ಕೆ ಕ್ಯಾತೆ ತೆಗೆದ ತಿಪ್ಪೇಸ್ವಾಮಿ ಮಲಗಿದ್ದ ಪತ್ನಿಯ ಮೇಲೆ ಮಚ್ಚಿನಿಂದ ಹೊಡೆದಿದ್ದು, ಗಾಯಾಳು ಲಕ್ಷ್ಮಿ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಇನ್ನೂ ಇತ್ತ ಪಾಪಿ ಗಂಡ ತಿಪ್ಪೇಸ್ವಾಮಿ ಎಸ್ಕೇಪ್ ಆಗಿದ್ದು, ಕೂಡಲೇ ಅಲರ್ಟ್ ಆಗಿದ್ದ ಪೊಲೀಸರು ಆರೋಪಿ ತಿಪ್ಪೇಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೂ ಗಾಯಾಳು ಲಕ್ಷ್ಮಿ ಹಾಗೂ ತಿಪ್ಪೇಸ್ವಾಮಿ ಇಬ್ಬರಿಗೂ ಎಂಟು ವರ್ಷಗಳ ಹಿಂದೆ ಮದುವೆ ಮಾಡಿದ್ದರು. ಹಿರಿಯೂರು ನಗರದಲ್ಲಿ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದರು. ಆದ್ರೆ ಕಳೆದ ಒಂದು ವರ್ಷದಿಂದ ಪತ್ನಿ ಲಕ್ಷ್ಮಿಯನ್ನು ಅನುಮಾನದಿಂದ ನೋಡುತ್ತಿದ್ದ. ಇದೇ ಕಾರಣಕ್ಕೆ ಕಳೆದ ಮೂರು ದಿನಗಳ ಹಿಂದೆ ತಿಪ್ಪೇಸ್ವಾಮಿ ಊರಲ್ಲಿ ಜಗಳ ಮಾಡಿದ್ದ. ಇದೇ ವಿಚಾರಕ್ಕೆ ಲಕ್ಷ್ಮಿ ಗಂಡನ ಮನೆ ಬಿಟ್ಟು, ತವರು ಮನೆಗೆ ಬಂದಿದ್ದಳು. ಇದೇ ದ್ವೇಷಕ್ಕೆ ಕೊಲೆ ಮಾಡಲು ಸ್ಕೆಚ್ ಹಾಕಿಕೊಂಡು ಬಂದಿದ್ದ ತಿಪ್ಪೇಸ್ವಾಮಿ, ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು, ಮಚ್ಚಿನಿಂದ ಹಲ್ಲೆ ಮಾಡಿ, ಕೊಲೆ ಯತ್ನ ಮಾಡಿದ್ದಾನೆ. ಇನ್ನೂ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಾರೆ ಪತ್ನಿಯ ಮೇಲಿನ ಅನುಮಾನಕ್ಕೆ ಹೆಂಡತಿಯನ್ನೇ ಕೊಲೆ ಮಾಡಿ ಮುಗಿಸಲು ಗಂಡನೇ ಸ್ಕೆಚ್ ಹಾಕಿದ್ದ. ಆದ್ರೆ ಅದೃಷ್ಟವಶಾತ್ ಮಚ್ಚಿನೇಟಿಗೆ ಗಂಭೀರವಾಗಿ ಪತ್ನಿ ಗಾಯಗೊಂಡಿದ್ದು, ಸಾವಿನಿಂದ ಪಾರಾಗಿದ್ದಾಳೆ. ಇತ್ತ ಹೆಂಡತಿಯನ್ನೇ ಮುಗಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದು, ಈತನಿಗೆ ತಕ್ಕ ಶಿಕ್ಷೆಯಾಗಬೇಕಿದೆ.

ಸ್ಲಗ್ : ಪತ್ನಿ ಸಾವು ಬದುಕಿನ ಹೋರಾಟ!

Edited By :
PublicNext

PublicNext

01/05/2026 08:49 am

Cinque Terre

12.04 K

Cinque Terre

0

ಸಂಬಂಧಿತ ಸುದ್ದಿ