", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/463655-1753248753-manjunath-(18).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸೋಮವಾರ ಜುಲೈ 21 ರಂದು ಆರೋಗ್ಯದ ಕಾರಣದಿಂದಾಗಿ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ...Read more" } ", "keywords": "Vice President Dhanakhar resignation, Mamata criticism, Congress outrage, political reasons. You can try searching online for more information on this topic. ", "url": "https://dashboard.publicnext.com/node" } ಉಪರಾಷ್ಟ್ರಪತಿ ಧನಕರ್ ರಾಜೀನಾಮೆಗೆ ರಾಜಕೀಯ ಕಾರಣ : ಮಮತಾ ಟೀಕೆ, ಕಾಂಗ್ರೆಸ್ ಆಕ್ರೋಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪರಾಷ್ಟ್ರಪತಿ ಧನಕರ್ ರಾಜೀನಾಮೆಗೆ ರಾಜಕೀಯ ಕಾರಣ : ಮಮತಾ ಟೀಕೆ, ಕಾಂಗ್ರೆಸ್ ಆಕ್ರೋಶ

ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸೋಮವಾರ ಜುಲೈ 21 ರಂದು ಆರೋಗ್ಯದ ಕಾರಣದಿಂದಾಗಿ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ್ದು, ದೇಶ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ನಗದು ಬಂಡಲ್‌ಗಳು ಪತ್ತೆಯಾಗಿವೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪದಚ್ಯುತಗೊಳಿಸುವ ಬಗ್ಗೆ ವಿಪಕ್ಷ ಸಂಸದರಿಂದ ಬಂದ ಶಿಫಾರಸ್ಸಿಗೆ ಅನುಮೋದನೆ ನೀಡಿದ ಕ್ರಮ ಕೇಂದ್ರ ಸರ್ಕಾರಕ್ಕೆ ಇಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರದಿಂದಾಗಿ ಧನಕರ್ ವಿರುದ್ಧ ಕೇಂದ್ರದ ಅಸಮಾಧಾನ ಉಂಟಾಗಿದ್ದು, ಅವರ ರಾಜೀನಾಮೆಗೆ ಕಾರಣವೆನಿಸಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ರಾಜ್ಯಸಭಾ ಅಧ್ಯಕ್ಷರಾಗಿದ್ದ ಧನಕರ್ ಅವರು ಈ ನಿರ್ಧಾರವನ್ನು ಸರ್ಕಾರದೊಂದಿಗೆ ಸಮಾಲೋಚನೆ ಇಲ್ಲದೆ ತೆಗೆದುಕೊಂಡಿದ್ದು, ಸರ್ಕಾರ ಸಂಪೂರ್ಣವಾಗಿ ಅಚ್ಚರಿಗೊಳಗಾಯಿತು. ನಂತರ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಧನಕರ್ ರಾಜೀನಾಮೆ ಪತ್ರವು ರಾತ್ರಿ 9.25ಕ್ಕೆ ಎಕ್ಸ್ ಖಾತೆಯಲ್ಲಿ ಪ್ರಕಟವಾಯಿತು.

ಅವರಿಗೆ ಇನ್ನೂ ಎರಡು ವರ್ಷಗಳ ಅವಧಿ ಬಾಕಿ ಉಳಿದಿದ್ದರೂ, ಆರೋಗ್ಯದ ಸಲಹೆ ಮೇರೆಗೆ ರಾಜೀನಾಮೆ ನೀಡುತ್ತಿರುವುದಾಗಿ ರಾಷ್ಟ್ರಪತಿಗೆ ಕಳುಹಿಸಿದ ಪತ್ರದಲ್ಲಿ ಧನಕರ್ ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಪ್ರಧಾನಿ ಮೋದಿ ಅವರು ಧನಕರ್ ಅವರಿಗೆ ಶುಭ ಹಾರೈಸಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಈ ರಾಜೀನಾಮೆಗೆ ಸರ್ಕಾರ ಸ್ಪಷ್ಟ ಕಾರಣ ಹೇಳಬೇಕು ಎಂದು ಆಗ್ರಹಿಸುತ್ತಿವೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಧನಕರ್ ಆರೋಗ್ಯವಾಗಿದ್ದರು ಎಂದು ಪರೋಕ್ಷವಾಗಿ ಟೀಕಿಸಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀನಾಮೆ ನೀಡಿದ ಮೂರನೇ ಉಪರಾಷ್ಟ್ರಪತಿಯಾಗಿರುವ ಧನಕರ್ ಅವರು ಹಿಂದೆ ರಾಜ್ಯಪಾಲರೂ ಆಗಿದ್ದರು. ಈಗ ಉಪರಾಷ್ಟ್ರಪತಿ ಸ್ಥಾನಕ್ಕೆ ಹರಿವಂಶ್ ಹೆಸರು ಮುಂಚಿತವಾಗಿ ಕೇಳಿಬರುತ್ತಿದೆ.

ಹಾಗಾದರೆ ಜಗದೀಪ್ ಧನಕರ್ ನಡೆದು ಬಂದ ಹಾದಿಯನ್ನ ನೋಡುದಾದರೆ ಜಗದೀಪ್ ಧನಕರ್ ಅವರು 1951ರ ಮೇ 18ರಂದು ರಾಜಸ್ಥಾನ ರಾಜ್ಯದ ಜುನ್ಜುನು ಜಿಲ್ಲೆಯ ಕಥಾನಾ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದರು.

ವಿಧಿವಿಜ್ಞಾನದಲ್ಲಿ ಪದವೀಧರರಾದ ಧನಕರ್, 1979ರ ನವೆಂಬರ್‌ನಲ್ಲಿ ರಾಜಸ್ಥಾನ ಬಾರ್ ಅಸೋಸಿಯೇಷನ್‌ನ ಮೂಲಕ ವಕೀಲರಾಗಿ ಯಶಸ್ಸು ಕಂಡರು. ರಾಜಕೀಯ ಪ್ರವೇಶದ ನಂತರ ಅವರು 1989ರಲ್ಲಿ ಜನತಾ ದಳದ ಪರವಾಗಿ ಧಜ್ಹಾದ್ ಜುಂಜುನು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

1990ರಲ್ಲಿ ಪ್ರಧಾನಿ ಚಂದ್ರಶೇಖರ್ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಬಳಿಕ ಕೆಲವು ಕಾಲ ರಾಜಕೀಯದಿಂದ ದೂರವಿದ್ದರು. 2008ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನಾಮನಿರ್ದೇಶಿತರಾದ ಧನಕರ್, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ನಿರಂತರ ಟೀಕೆ ನಡೆಸಿ ಸಾಕಷ್ಟು ಸುದ್ದಿ ಗಳಿಸಿದರು. ತಮ್ಮ ಮಾತುಗಳಿಂದಾಗಿ ವಿಪಕ್ಷಗಳ ಮನ್ನಣೆಗೂ ಪಾತ್ರರಾದರು ಮತ್ತು ನ್ಯಾಯಾಂಗದ ನ್ಯೂನತೆಗಳ ಕುರಿತು ಕೆಲವೊಮ್ಮೆ ದಿಟ್ಟವಾಗಿ ಮಾತನಾಡುತ್ತಿದ್ದರು.

Edited By :
PublicNext

PublicNext

23/07/2025 11:02 am

Cinque Terre

24.42 K

Cinque Terre

0

ಸಂಬಂಧಿತ ಸುದ್ದಿ