", "articleSection": "Crime,Law and Order,Viral", "image": { "@type": "ImageObject", "url": "https://prod.cdn.publicnext.com/s3fs-public/52563-1753257496-WhatsApp-Image-2025-07-23-at-1.19.11-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಠಾಣೆ : ಆಸ್ಪತ್ರೆಗೆ ಬರುವವರು ಮೊದಲು ಸ್ವಲ್ಪ ತಾಳ್ಮೆ ಇಟ್ಟುಕೊಂಡು ಬರಬೇಕು ಇಲ್ಲವಾದ್ರೆ ದೊಡ್ಡ ದೊಡ್ಡ ಅನಾಹುತಗಳಾಗಬಹುದು. ಸದ್ಯ ವೈರಲ್‌ ಆದ ವ...Read more" } ", "keywords": ""hospital assault, receptionist attacked, Kalyan clinic incident, healthcare violence, patient aggression, medical staff safety" ", "url": "https://dashboard.publicnext.com/node" } ಆಸ್ಪತ್ರೆ ಸ್ವಾಗತಕಾರಿಣಿಯ ಕೂದಲು ಹಿಡಿದೆಳೆದು ಹಲ್ಲೆ..ಕಲ್ಯಾಣ್​ ಕ್ಲಿನಿಕ್​ನಲ್ಲೊಂದು ಭಯಾನಕ ದೃಶ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ಪತ್ರೆ ಸ್ವಾಗತಕಾರಿಣಿಯ ಕೂದಲು ಹಿಡಿದೆಳೆದು ಹಲ್ಲೆ..ಕಲ್ಯಾಣ್​ ಕ್ಲಿನಿಕ್​ನಲ್ಲೊಂದು ಭಯಾನಕ ದೃಶ್ಯ

ಠಾಣೆ : ಆಸ್ಪತ್ರೆಗೆ ಬರುವವರು ಮೊದಲು ಸ್ವಲ್ಪ ತಾಳ್ಮೆ ಇಟ್ಟುಕೊಂಡು ಬರಬೇಕು ಇಲ್ಲವಾದ್ರೆ ದೊಡ್ಡ ದೊಡ್ಡ ಅನಾಹುತಗಳಾಗಬಹುದು. ಸದ್ಯ ವೈರಲ್‌ ಆದ ವಿಡಿಯೋ ನೋಡಿದ್ರೆ ಒಂದು ಕ್ಷಣ ಬೆಚ್ಚಿಬಿಳುವಂತಿದೆ. ಹೌದು ಕಲ್ಯಾಣ್​​ ಕ್ಲಿನಿಕ್​ನಲ್ಲೊಂದು ಭಯಾನಕ ಘಟನೆ ಸಂಭವಿಸಿದೆ. ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬ ಸೋಮವಾರ ಸಂಜೆ (ಜುಲೈ 21) ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಹೌದು ಇಲ್ಲಿನ ಖಾಸಗಿ ಮಕ್ಕಳ ಆಸ್ಪತ್ರೆಯೊಂದರಲ್ಲಿ ಪೂರ್ವಾನುಮತಿ ಇಲ್ಲದೆ ವೈದ್ಯರ ಕೊಠಡಿಗೆ ತೆರಳುತ್ತಿದ್ದ ವೇಳೆ ತಡೆದ ಸ್ವಾಗತಕಾರಿಣಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರ ಮೂಲದ ವಲಸೆ ಕಾರ್ಮಿಕ, ಸ್ವಾಗತಕಾರಿಣಿ ಮೇಲೆ ಹಲ್ಲೆ ನಡೆಸಿ, ಆಕೆಯ ತಲೆಗೂದಲು ಹಿಡಿದುಕೊಂಡು ಆಸ್ಪತ್ರೆಯ ನೆಲದ ಮೇಲೆ ಎಳೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆಕೆಯನ್ನು ಸ್ಥಳದಲ್ಲಿದ್ದ ರೋಗಿಗಳ ಕುಟುಂಬಸ್ಥರು ರಕ್ಷಿಸಿದ್ದಾರೆ.

25 ವರ್ಷದ ಗೋಕುಲ್ ಝಾ ಎಂಬಾತ ಈ ಕೃತ್ಯ ಎಸಗಿದ್ದು, ಮಗುವನ್ನು ಹಿಡಿದುಕೊಂಡು ಆತನೊಂದಿಗೆ ಬಂದಿದ್ದ ಮಹಿಳೆಯನ್ನು ಸರತಿ ತಪ್ಪಿಸಿ ವೈದ್ಯರನ್ನು ಭೇಟಿಯಾಗಲು ಯತ್ನಿಸಿದ್ದಾನೆ. ಈ ವೇಳೆ ವೈದ್ಯರು ಬೇರೆ ರೋಗಿಗಳ ಶುಶ್ರೂಷೆಯಲ್ಲಿದ್ದುದ್ದರಿಂದ ಗೋಕುಲ್‌ನನ್ನು ಸ್ವಾಗತಕಾರಣಿ ತಡೆದಿದ್ದಾಳೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತೆಗೆ ಗಂಭೀರ ಗಾಯಗಳಾಗಿದ್ದು, ಡೊಂಬಿವಿಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನ ಅನ್ವಯ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಇನ್ನೂ ಆರೋಪಿಗೆ ಕ್ರಿಮಿನಲ್ ಹಿನ್ನೆಲೆ ಇದ್ದು, ವಿಟ್ಟಲ್‌ವಾಡಿ ಹಾಗೂ ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿತ್ತು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ’ ಎಂದು ಪೊಲೀಸ್ ಉಪ ಆಯುಕ್ತ ಅತುಲ್ ಜೆಂಡೆ ತಿಳಿಸಿದ್ದಾರೆ.

ಘಟನೆ ನಡೆಯುವಾಗ ಸ್ಥಳದಲ್ಲಿದ್ದ ಝಾ ಸಹೋದರ ಹಾಗೂ ಇಬ್ಬರು ಮಹಿಳೆಯರನ್ನೂ ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವುದನ್ನು ‍ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

23/07/2025 01:41 pm

Cinque Terre

109.69 K

Cinque Terre

17

ಸಂಬಂಧಿತ ಸುದ್ದಿ