", "articleSection": "Government,International", "image": { "@type": "ImageObject", "url": "https://prod.cdn.publicnext.com/s3fs-public/463655-1753801305-manjunath-(98).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶ್ರೀನಗರ: ಭಾರತದ ಮೇಲೆ ಪಾಕ್ ನಡೆಸಿದ ಪಹಲ್ಗಾಮ್ ದಾಳಿಯ ಮಾಸ್ಟ್‌ರ್‌ ಮೈಂಡ್‌ ಹಾಶಿಂ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾ ಇಂದು ಭಾರತೀಯ ಸೇನೆಯ ವಿಶೇ...Read more" } ", "keywords": "Pahalgam terrorist encounter, terrorist killed, Modi challenge, terrorist attack, security forces operation, Jammu and Kashmir terrorism. ", "url": "https://dashboard.publicnext.com/node" } “ಹೋಗಿ ಮೋದಿಗೆ ಹೇಳು” ಎಂದು ಸವಾಲು ಹಾಕಿದ್ದ ಪಹಲ್ಗಾಮ್ ದಾಳಿಕೋರ ಎನ್ಕೌಂಟರ್‌ನಲ್ಲಿ ಹತ್ಯೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

“ಹೋಗಿ ಮೋದಿಗೆ ಹೇಳು” ಎಂದು ಸವಾಲು ಹಾಕಿದ್ದ ಪಹಲ್ಗಾಮ್ ದಾಳಿಕೋರ ಎನ್ಕೌಂಟರ್‌ನಲ್ಲಿ ಹತ್ಯೆ

ಶ್ರೀನಗರ: ಭಾರತದ ಮೇಲೆ ಪಾಕ್ ನಡೆಸಿದ ಪಹಲ್ಗಾಮ್ ದಾಳಿಯ ಮಾಸ್ಟ್‌ರ್‌ ಮೈಂಡ್‌ ಹಾಶಿಂ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾ ಇಂದು ಭಾರತೀಯ ಸೇನೆಯ ವಿಶೇಷ ಪಡೆ ನಡೆಸಿದ ಎನ್ಕೌಂಟರ್‌ನಲ್ಲಿ ಹತ್ಯೆಗೀಡಾಗಿದ್ದಾನೆ.

2024ರ ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ 26 ಮಂದಿ, ಪ್ರವಾಸಿಗರು, ಸಾವನ್ನಪ್ಪಿದ್ದರು. ಈ ದಾಳಿಯ ವೇಳೆ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿಗೆ “ಹೋಗಿ ಮೋದಿಗೆ ಹೇಳು” ಎಂದು ಸವಾಲು ಹಾಕಿದ್ದ ಮೂಸಾ ಇದೀಗ ಭಾರತೀಯ ಸೈನ್ಯದ ಗುಂಡಿಗೆ ಬಲಿಯಾಗಿದ್ದಾನೆ.

ಪಾಕ್‌ ಸೇನೆಯ ಮಾಜಿ ವಿಶೇಷ ಪಡೆ ಸದಸ್ಯನಾಗಿದ್ದ ಹಾಶಿಂ ಮೂಸಾ, ಡಚಿಗಾಮ್ ಬಳಿಯ ಹರ್ವಾನ್‌ನ ಮುಲ್ನಾರ್ ಪ್ರದೇಶದಲ್ಲಿ ಅಡಗಿದ್ದ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆದಿತ್ತು. ‘ಆಪರೇಷನ್ ಮಹಾದೇವ್’ ಎಂಬ ಹೆಸರಿನಲ್ಲಿ ಈ ಎನ್ಕೌಂಟರ್ ನಡೆಸಿದೆ.

ಎನ್ಕೌಂಟರ್ ವೇಳೆ ಮೂಸಾ ಜೊತೆಗೆ ಇನ್ನೊಬ್ಬ ಪಾಕಿಸ್ತಾನಿ ಉಗ್ರನನ್ನೂ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಸ್ಥಳದಿಂದ ಅಮೆರಿಕನ್ ಕಾರ್ಬೈನ್, ಎಕೆ-47, 17 ರೈಫಲ್ ಗ್ರೆನೇಡ್‌ಗಳು ಹಾಗೂ ಇತರೆ ಮಿಲಿಟರಿ ಶಸ್ತ್ರಾಸ್ತ್ರಗಳ ಸಂಗ್ರಹ ವಶಪಡಿಸಿಕೊಳ್ಳಲಾಗಿದೆ.

2023ರಲ್ಲಿ ಶ್ರೀನಗರ-ಸೋನ್ಮಾರ್ಗ್ ಹೆದ್ದಾರಿಯ ಝಡ್-ಮೋರ್ಹ್ ಸುರಂಗ ನಿರ್ಮಾಣವಲ್ಲಿದ್ದ 7 ಜನ ಕಾರ್ಮಿಕರ ಹತ್ಯೆಯಲ್ಲೂ ಮೂಸಾ ಪಾತ್ರವಹಿಸಿದ್ದನು. ಪಹಲ್ಗಾಮ್ ದಾಳಿ ಸೇರಿದಂತೆ ಹಲವು ಕೃತ್ಯಗಳಲ್ಲಿ ಈತನ ನಂಟು ಸಾಬೀತಾಗಿತ್ತು.

ಪಹಲ್ಗಾಮ್ ದಾಳಿ ಮತ್ತು ಇದರಿಂದ ಉಂಟಾದ ಪರಿಣಾಮಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲಿರುವ ದಿನದಂದೇ ಈ ಎನ್ಕೌಂಟರ್ ನಡೆದಿರುವುದು ಗಣನೀಯವಾಗಿದೆ. ಈ ದಾಳಿಗೆ ಹೊಣೆ ಹೊತ್ತಿರುವ ಲಷ್ಕರ್-ಎ-ತೈಬಾದ ಅಂಗ ಸಂಸ್ಥೆಯಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಇದರ ಹೊಣೆ ಹೊತ್ತಿದೆ.

Edited By :
PublicNext

PublicNext

29/07/2025 08:32 pm

Cinque Terre

39.34 K

Cinque Terre

5

ಸಂಬಂಧಿತ ಸುದ್ದಿ