", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1753955763-_(1280-x-720-px)-(60).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ಭಾರತ ಮತ್ತು ರಷ್ಯಾದ ಆರ್ಥಿಕ ವ್ಯವಸ್ಥೆಯನ್ನು ಟೀಕಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಅವರಿಗೆ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್...Read more" } ", "keywords": "Donald Trump economic threat, India Russia trade, Rajdeep Sardesai critique, Trump India relations, US sanctions on India, trade war implications, economic cooperation India Russia", "url": "https://dashboard.publicnext.com/node" }
ನವದೆಹಲಿ : ಭಾರತ ಮತ್ತು ರಷ್ಯಾದ ಆರ್ಥಿಕ ವ್ಯವಸ್ಥೆಯನ್ನು ಟೀಕಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಅವರಿಗೆ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ತಿರುಗೇಟು ನೀಡಿದ್ದಾರೆ.
ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಟ್ರಂಪ್, ಭಾರತದ ಮೇಲೆ ದ್ವೇಷ ಸಾಧಿಸುತ್ತಲೇ ಬಂದಿದ್ದಾರೆ. ಭಾರತದಿಂದ ಆಮದಾಗುವ ವಸ್ತುಗಳಿಗೆ ಅಧಿಕ ಸುಂಕ ವಸೂಲಿಗೆ ಮುಂದಾಗಿರುವುದು ಒಂದೆಡೆಯಾದರೆ, ಇದೀಗ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸತ್ತ ಹೆಣಕ್ಕೆ ಹೋಲಿಕೆ ಮಾಡಿದ್ದಾರೆ.
ಭಾರತ ಹಾಗೂ ರಷ್ಯಾ ನಡುವಿನ ಸ್ನೇಹ ಟ್ರಂಪ್ ಹೊಟ್ಟೆಯಲ್ಲಿ ಬೆಂಕಿ ಹಾಕಿದಂತಾಗಿದೆ. ಭಾರತ ಮತ್ತು ರಷ್ಯಾ ನಡುವಿನ ನಿಕಟ ಸ್ನೇಹದ ಬಗ್ಗೆ ವಾಗ್ದಾಳಿ ನಡೆಸಿರುವ ಟ್ರಂಪ್, ಭಾರತ ರಷ್ಯಾ ಈಗಾಗಲೇ ಸತ್ತಿರುವ ತಮ್ಮ ಆರ್ಥಿಕತೆಯನ್ನು ಒಟ್ಟಿಗೆ ಇನ್ನಷ್ಟು ನೆಲಕಚ್ಚುವಂತೆ ಮಾಡಿಕೊಳ್ಳುತ್ತವೆ ಅಷ್ಟೇ ಎಂದಿದ್ದಾರೆ.
ಟ್ರಂಪ್ ಅವರ ಹೇಳಿಕೆ ಪತ್ರಕರ್ತ ಸರ್‌ದೇಸಾಯಿಯವನ್ನು ಕೆರಳಿಸಿದ್ದು, ವಿಶ್ವದ ದೊಡ್ಡಣ್ಣನಿಗೆ ಭರ್ಜರಿ ಟಾಂಗ್ ಕೊಟ್ಟಿದ್ದಾರೆ. ಅಮೆರಿಕ ವಿಷಯವಾಗಿ ಭಾರತ ಬಹಳ ದಿನದಿಂದ ಮೌನ ವಹಿಸಿದೆ. ಭಾರತ ಹಾಗೂ ಪಾಕ್ ನಡುವಿನ ಕದನ ವಿರಾಮ ಘೋಷಣೆಯಲ್ಲಿ ನಾನೇ ಮಧ್ಯಸ್ಥಿಕೆ ವಹಿಸಿದ್ದಾಗಿ ಸಾಕಷ್ಟು ಬಾರಿ ಹೇಳಿಕೊಳ್ಳುತ್ತಿದ್ದರೂ ಸಹ ಭಾರತ ಮೌನವಾಗಿಯೇ ಉಳಿದಿದೆ. ಇದು ಟ್ರಂಪ್ ಅವರಿಗೆ ಇರಿಸು ಮುರಿಸು ಆದಂತೆ ಕಾಣುತ್ತದೆ. ಅವರು ಭಾರತದ ಗಮನ ತಮ್ಮತ್ತ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ ಅನ್ನಿಸುತ್ತದೆ. ಇದೇ ಕಾರಣಕ್ಕೆ ಅವರು ಪದೇ ಪದೇ ಭಾರತ್- ಪಾಕ್ ಕದನ ವಿರಾಮದ ಮಧ್ಯಸ್ಥಿಕೆಯ ಕ್ರೆಡಿಟ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಭಾರತದ ಆರ್ಥಿಕತೆಯನ್ನು ಟೀಕಿಸುವ ಮೂಲಕ ಭಾರತವನ್ನು ಅಣುಕಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕುವ ಸಮಯ ಈಗ ಬಂದಂತೆ ಕಾಣುತ್ತದೆ. ಅದು ಭಾರತದಿಂದ ಆಗುತ್ತದೆಯೋ ಅಥವಾ ಚೀನಾ ಮಾಡುತ್ತದೆಯೋ ಎಂದು ಸರ್‌ದೇಸಾಯಿ ಟ್ವೀಟ್ ಮಾಡಿದ್ದಾರೆ.
PublicNext
31/07/2025 03:26 pm