", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/52563-1754038500-WhatsApp-Image-2025-08-01-at-1.48.49-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಲಂಡನ್ : ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್‌ನ ಮೊದಲ ದಿನವೇ ವಿವಾದಾತ್ಮಕ ಕೈ ಸನ್ನೆ ಮೂಲಕ ಅಂಪೈರ್ ಡಿಆರ್‌ಎಸ್ ಉಳಿಸಿದ ಘಟನೆಯ ವಿ...Read more" } ", "keywords": "DRS controversy, England cricket, Ashes 2023, Umpire decision, Viral video, Cricket fans reaction, Ben Duckett catch, Mitchell Starc, Steve Smith catch, Joe Root"", "url": "https://dashboard.publicnext.com/node" }
ಲಂಡನ್ : ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್‌ನ ಮೊದಲ ದಿನವೇ ವಿವಾದಾತ್ಮಕ ಕೈ ಸನ್ನೆ ಮೂಲಕ ಅಂಪೈರ್ ಡಿಆರ್‌ಎಸ್ ಉಳಿಸಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಆಟದ ಮಧ್ಯೆ ಅಂಪೈರ್ ಧರ್ಮಸೇನಾ ಇಂಗ್ಲೆಂಡ್ ಆಟಗಾರರಿಗೆ ನೆರವಾದದ್ದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಧರ್ಮಸೇನಾ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಮಾಜಿ ಭಾರತೀಯ ಆಟಗಾರರು ಆಗ್ರಹಿಸಿದ್ದಾರೆ.
ಮೊದಲ ದಿನದಾಟದಲ್ಲಿ ವೇಗಿ ಜೋಶ್ ಟಂಗ್ ಎಸೆತದಲ್ಲಿ ಚೆಂಡು ಸಾಯಿ ಸುರ್ಶನ್ ಕಾಲಿಗೆ ಬಡಿದಾಗ ಇಂಗ್ಲೆಂಡ್ ಆಟಗಾರರು ಎಲ್‌ಬಿಡಬ್ಲ್ಯುಗೆ ಮನವಿ ಮಾಡಿರು. ಆದರೆ ಫೀಲ್ಡ್ ಅಂಪೈರ್ ಆಗಿದ್ದ ಧರ್ಮಸೇನಾ ಮನವಿಯನ್ನು ತಳ್ಳಿಹಾಕಿದರು. ಯಾರ್ಕರ್ ಎಸೆತವಾಗಿದ್ದ ಕಾರಣ ಇಂಗ್ಲೆಂಡ್ ಆಟಗಾರರು ಡಿಆರ್‌ಎಸ್ ಮೊರೆ ಹೋಗಲು ನಿರ್ಧರಿಸುವ ಬಗ್ಗೆ ಚರ್ಚಿಸುತ್ತಿರುವ ಧರ್ಮಸೇನಾ ಚೆಂಡು ಬ್ಯಾಟ್‌ಗೆ ಇನ್‌ಸೈಡ್ ಎಡ್ಜ್ ಆಗಿದೆ ಎಂಬಂತೆ ಕೈಯಲ್ಲಿ ಸನ್ನೆ ಮಾಡಿ ತೋರಿಸಿದರು. ಇದರಿಂದ ಇಂಗ್ಲೆಂಡ್ ಆಟಗಾರರು ಡಿಆರ್‌ಎಸ್ ಮೊರೆ ಹೋಗದೆ ತಮ್ಮ ಡಿಆರ್‌ಎಸ್ ವ್ಯರ್ಥಮಾಡಿಕೊಳ್ಳುದ್ದನ್ನು ತಪ್ಪಿಸಿಕೊಂಡರು.
ಅಂಪೈರ್‌ಗಳಿಗೆ ಈ ರೀತಿಯ ಸನ್ನೆ ಮಾಡಲು ಅವಕಾಶ ಇಲ್ಲದಿದ್ದರೂ ಕೂಡ ಈ ರೀತಿ ಮಾಡಿದ್ದಕ್ಕೆ ಧರ್ಮಸೇನಾ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದೆ. ಜತೆಗೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
PublicNext
01/08/2025 02:25 pm