", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/463655-1754053654-manjunath---2025-08-01T183725.852.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭೋಪಾಲ್: ತಾನು ಯುಕೆ ಮೂಲದ ಉನ್ನತ ಹೃದಯ ತಜ್ಞ ಎಂದು ಹೇಳಿಕೊಂಡ ನಕಲಿ ವೈದ್ಯನೊಬ್ಬ ಐವರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಸಾವಿಗೆ ಕಾರಣವಾದ ...Read more" } ", "keywords": ""Fake doctor arrested, UK expert impersonation, false medical claims, doctor arrested for murder, fake medical practitioner, UK doctor fake identity, medical negligence case, impersonation charges" ", "url": "https://dashboard.publicnext.com/node" }
ಭೋಪಾಲ್: ತಾನು ಯುಕೆ ಮೂಲದ ಉನ್ನತ ಹೃದಯ ತಜ್ಞ ಎಂದು ಹೇಳಿಕೊಂಡ ನಕಲಿ ವೈದ್ಯನೊಬ್ಬ ಐವರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಸಾವಿಗೆ ಕಾರಣವಾದ ಭೀಕರ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಮಿಷನ್ ಆಸ್ಪತ್ರೆಯಲ್ಲಿ ನಡೆದಿದೆ.
ಆರೋಪಿ ನರೇಂದ್ರ ವಿಕ್ರಮಾದಿತ್ಯ ಯಾದವ್, ಎಂದು ಗುರುತಿಸಲಾಗಿದ್ದು, ಜನರಿಗೆ "ಜಾನ್ ಕ್ಯಾಮ್" ಎಂಬ ನಕಲಿ ಹೆಸರು ಬಳಸಿ, ಜನವರಿ 2 ರಿಂದ ಫೆಬ್ರವರಿ 11ರ ನಡುವೆ ಒಟ್ಟು 12 ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದ. ಈ ವೇಳೆ ಐದು ರೋಗಿಗಳು ಚಿಕಿತ್ಸೆ ಪಡೆದ ದಿನವೇ ಮೃತಪಟ್ಟಿದ್ದು, ಇಬ್ಬರು ಶಸ್ತ್ರಚಿಕಿತ್ಸೆಯ ಸಮಯದಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಉಳಿದ ಮೂವರು ಚಿಕಿತ್ಸೆಯ ಕೆಲವೇ ದಿನಗಳ ನಂತರ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆ ಪಡೆದ ದಿನವೇ ರಹೀಸಾ ಬೇಗಂ 63, ಇಸ್ರೇಲ್ ಖಾನ್ 75, ಬುದ್ಧ ಅಹಿರ್ವಾರ್ 67, ಮಂಗಲ್ ಸಿಂಗ್ ರಜಪೂತ್ 65,
ಸತ್ಯೇಂದ್ರ ಸಿಂಗ್ ರಾಥೋಡ್ 51, ಮೃತಪಟ್ಟಿದ್ದಾರೆ. ಇಬ್ಬರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರಾಣಬಿಟ್ಟಿದ್ದು, ಮೂವರು ಚಿಕಿತ್ಸೆಯ ಕೆಲವೇ ದಿನಗಳ ನಂತರ ಸಾವನ್ನಪ್ಪಿದ್ದಾರೆ.
ಮೃತರ ಸಂಬಂಧಿತ ಕುಟುಂಬಗಳ ದೂರುಗಳ ಮೇರೆಗೆ ಪೊಲೀಸರು ಯಾದವ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ.
PublicNext
01/08/2025 06:38 pm