", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/235762-1756305268-Untitled-design---2025-08-27T200419.679.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Lokesh Haanagal" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹಾನಗಲ್: ಕಾಡು ಪ್ರಾಣಿ ಹಾವಳಿ ತಡೆಯಲು ಹಾಕಲಾದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ, ಬುಧವಾರ ಬೆಳಗಿನ ಜಾವ 4:30 ರ ಸು...Read more" } ", "keywords": "Hanagal Ganesh festival tragedy, Hanagal accident news, Ganesh habba death, electric wire accident Hanagal, Karnataka festival tragedy, Ganesh festival mishap, Hanagal latest news, Karnataka accident update, festival day tragedy, Ganesh habba casualty", "url": "https://dashboard.publicnext.com/node" } ಹಾನಗಲ್: ಗಣೇಶ ಹಬ್ಬದ ದಿನವೇ ದುರಂತ.! ವಿದ್ಯುತ್ ತಂತಿ ತಗುಲಿ ಓರ್ವ ಸಾವು.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್: ಗಣೇಶ ಹಬ್ಬದ ದಿನವೇ ದುರಂತ.! ವಿದ್ಯುತ್ ತಂತಿ ತಗುಲಿ ಓರ್ವ ಸಾವು.!

ಹಾನಗಲ್: ಕಾಡು ಪ್ರಾಣಿ ಹಾವಳಿ ತಡೆಯಲು ಹಾಕಲಾದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ, ಬುಧವಾರ ಬೆಳಗಿನ ಜಾವ 4:30 ರ ಸುಮಾರಿಗೆ ಹಾನಗಲ್ ತಾಲೂಕು ಇನಾಮ್ ನೀರಲಗಿ ಗ್ರಾಮದಲ್ಲಿ ನಡೆದಿದೆ.

ಗೌರಿ ಗಣೇಶ ಹಬ್ಬದoದು ಮಂಟಪದ ಅಲಂಕಾರಕ್ಕೆoದು ಮಾವಿನ ತೋರಣ ಹಾಗೂ ಗೋವಿನಜೋಳ ತರಲು ಹೊಲಕ್ಕೆ ತೆರಳಿದ್ದರು.. ಗೊವಿನಜೋಳ ಕೀಳುವ ಸಂದರ್ಭದಲ್ಲಿ ಹೊಲದಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ಕಾಲಿಗೆ ತಗುಲಿ 26 ವರ್ಷದ ಅಣ್ಣಪ್ಪ ಪಡವೇಶಪ್ಪ ಕ್ಯಾಸನೂರ್, ಸ್ಥಳದಲ್ಲೇ ಮೃತಪಟ್ಟಿದ್ದು, ಮಂಜುನಾಥ್ ಸಿದ್ದಮ್ಮನವರ್ ಗಾಯಗೊಂಡಿದ್ದಾರೆ..

ಪ್ರಭು ಚನ್ನಪ್ಪ ಹಾವೇರಿ, ಎಂಬುವರು ತಮ್ಮ ಜಮೀನಿನಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಯಲು ಅನಧಿಕೃತವಾಗಿ ಹೊಲಕ್ಕೆ ವಿದ್ಯುತ್ TC ಕಂಬದಿಂದ ನೇರವಾಗಿ ತಂತಿಯನ್ನು ಅಳವಡಿಸಿದ್ದರು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

27/08/2025 08:05 pm

Cinque Terre

13.32 K

Cinque Terre

0