", "articleSection": "Politics,Infrastructure", "image": { "@type": "ImageObject", "url": "https://prod.cdn.publicnext.com/s3fs-public/474799-1756379662-03-08-2025.03_27_19_14.Still029.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Durgesh Maski" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಸ್ಕಿ: ತಮ್ಮ ಸಮುದಾಯವನ್ನು ಪ್ರವರ್ಗ–ಎ ನಲ್ಲಿಯೇ ಇರಿಸಿ ಶೇ 1%ರಷ್ಟು ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ‘ಪರಿಶಿಷ್ಟ ಜಾತಿಯ 59 ಸೂಕ್ಷ್ಮ, ಅತಿ ...Read more" } ", "keywords": "Maski, 1 percent reservation, nomadic demand, internal reservation, nomadic communities, reservation issue, Karnataka politics, social justice, nomadic rights, Maski news ", "url": "https://dashboard.publicnext.com/node" } ಮಸ್ಕಿ: ಶೇ 1% ರಷ್ಟು ಒಳ ಮೀಸಲಾತಿಗೆ ಅಲೆಮಾರಿಗಳ ಆಗ್ರಹ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಸ್ಕಿ: ಶೇ 1% ರಷ್ಟು ಒಳ ಮೀಸಲಾತಿಗೆ ಅಲೆಮಾರಿಗಳ ಆಗ್ರಹ

ಮಸ್ಕಿ: ತಮ್ಮ ಸಮುದಾಯವನ್ನು ಪ್ರವರ್ಗ–ಎ ನಲ್ಲಿಯೇ ಇರಿಸಿ ಶೇ 1%ರಷ್ಟು ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ‘ಪರಿಶಿಷ್ಟ ಜಾತಿಯ 59 ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿಗಳ ಸಮುದಾಯಗಳ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿ ಗುರುವಾರ ಮಸ್ಕಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಒಳ ಮೀಸಲಾತಿ ಜಾರಿ ಮಾಡುವ ಒತ್ತಡದಲ್ಲಿದ್ದ ಸರ್ಕಾರ 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂ ದನಿ ಇಲ್ಲದ ಅಲೆಮಾರಿಗಳಂತಹ ಸಮುದಾಯಗಳ ವಿಷಯದಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಹುಸೇನಪ್ಪ ಬಿ, ವಿಭೂತಿ ರಾ ಅ ಸು ಸಿ ಮಾ ಪ್ರ ಕಾರ್ಯದರ್ಶಿ ಮಾತನಾಡಿ,ಅಲೆಮಾರಿಗಳನ್ನು ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳ ಜೊತೆಗೆ ಸೇರಿಸಿ ಶೇ 5% ರಷ್ಟು ಮೀಸಲಾತಿ ನಿಗದಿ ಮಾಡಿರುವುದರಿಂದ ಅಲೆಮಾರಿ ಸಮುದಾಯಗಳು ಶಾಶ್ವತವಾಗಿ ಮೀಸಲಾತಿಯಿಂದ ವಂಚಿತವಾಗಲಿವೆ. ಹಲವು ವರ್ಷಗಳಿಂದ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿಯೇ ಬದುಕಿ ಬಂದ ಸಮುದಾಯಗಳಿಗೆ ಸ್ವಾತಂತ್ರ್ಯ ನಂತರವೂ ಸಂವಿಧಾನ ಬದ್ಧ ಸೌಲಭ್ಯಗಳು ದೊರಕಿಲ್ಲ ಎಂದು ಆರೋಪಿಸಿದರು. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗದ ವರದಿಯಲ್ಲಿ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹವನ್ನು ಪ್ರವರ್ಗ–ಎ ನಲ್ಲಿ ವರ್ಗೀಕರಿಸಿರುವುದು ನ್ಯಾಯಸಮ್ಮತವಾಗಿದೆ. ಆದರೆ,ಈ ಜಾತಿಗಳನ್ನು ಸರ್ಕಾರ ಪ್ರವರ್ಗ–ಸಿ ನಲ್ಲಿ ಸೇರಿಸಿ ಶೇ 5% ರಷ್ಟು ಒಳ ಮೀಸಲಾತಿ ನೀಡಲು ಮುಂದಾಗಿರುವುದರಿಂದ ಈ ಸಮುದಾಯಗಳಿಗೆ ಮರಣ ಶಾಸನವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಆಯೋಗದ ಶಿಫಾರಸಿನಂತೆ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ– ‘ಎ’ ನಲ್ಲಿಯೇ ಇರಿಸಿ ಶೇ 1% ರಷ್ಟು ಒಳ ಮೀಸಲಾತಿ ನೀಡಬೇಕು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹಾಗೂ ಬಿ.ಆರ್.ಅಂಬೇಡ್ಕರ್‌ ಮತ್ತು ದಾರ್ಶನಿಕರ ಆಶಯದಂತೆ ಕಟ್ಟ ಕಡೆಯವರಿಗೆ ಮೀಸಲಾತಿಯಲ್ಲಿ ಆದ್ಯತೆ ನೀಡಿದಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಹುಸೇನಪ್ಪ ಬಿ, ವಿಭೂತಿ ರಾ ಅ ಸು ಸಿ ಮಾ ಪ್ರ ಕಾರ್ಯದರ್ಶಿ, ಮಲ್ಲಯ್ಯ ಶಿರಿಪಾತ ಬುಡ ಜಂಗಮ ಕಾರ್ಯದರ್ಶಿ, ದಲಿತ ಸಮಾಜದ ಮುಖಂಡರಾದ ದಾನಪ್ಪ ನಿಲಗಲ್,‌ ದೊಡ್ಡಪ್ಪ ಮುರಾರಿ, ಮಲ್ಲಯ್ಯ ಬುಳ್ಳಾ, ಹನುಮಂತಪ್ಪ ವೆಂಕಟಾಪುರ, ಚಿನ್ನಪ್ಪ, ಶ್ಯಮರಾಜ್, ಲಕ್ಷ್ಮಣ್ ರಾಜ್,ಎಂ ಎಂ ದುರ್ಗಪ್ಪ, ಸಿಂಹಾದ್ರಿ, ಪ್ರಶಾಂತ್, ಮುದುಕಪ್ಪ ಹಾಗೂ ಇನ್ನಿತರ ಅಲೆಮಾರಿ ಸಮಾಜದ ಮುಖಂಡರು ಹಾಗೂ ದಲಿತ ಪರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

28/08/2025 04:44 pm

Cinque Terre

6.58 K

Cinque Terre

0