", "articleSection": "Infrastructure,Education", "image": { "@type": "ImageObject", "url": "https://prod.cdn.publicnext.com/s3fs-public/286525-1756795125-WhatsApp-Image-2025-09-02-at-12.08.38-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Durgesh Maski" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಸ್ಕಿ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಹಾಸ್ಟೆಲ್ ನ ವಿದ್ಯಾರ್ಥಿನಿಯರ ಗೋಳು ಕೇಳುವವರು ಯಾರು ಎಂಬುದು ಪ್ರಶ...Read more" } ", "keywords": "Maski, hostel issues, scheduled tribe girls, pre-metric education, student accommodation problems", "url": "https://dashboard.publicnext.com/node" }
ಮಸ್ಕಿ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಹಾಸ್ಟೆಲ್ ನ ವಿದ್ಯಾರ್ಥಿನಿಯರ ಗೋಳು ಕೇಳುವವರು ಯಾರು ಎಂಬುದು ಪ್ರಶ್ನೆಯಾಗಿದೆ. ಪಟ್ಟಣದ ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ 6ನೇ ತರಗತಿಯಿಂದ 10 ನೇ ತರಗತಿವರೆಗೆ ಒಟ್ಟು 110 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.
ಈ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ನಲ್ಲಿ ಓದಿ ಕೊಳ್ಳುವುದೇ ಒಂದು ಸವಾಲಿನ ಕೆಲಸವಾಗಿದೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಈ ಹಾಸ್ಟೆಲ್ ವಿಶೇಷವಾಗಿ ಹೆಣ್ಣು ಮಕ್ಕಳ ಹಾಸ್ಟೆಲ್ ಆಗಿರುವ ಕಾರಣ ಕೆಲವು ವಿಶೇಷ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕಾಗುತ್ತದೆ. ಆದರೆ, ವಿಶೇಷ ಸೌಲಭ್ಯಗಳಿರಲಿ, ಮೂಲ ಸೌಲಭ್ಯ ಒದಗಿಸಿ ಕೊಡುವಲ್ಲಿಯೂ ಹಾಸ್ಟೆಲ್ ವಾರ್ಡನ್ ನೀಲಿಫರ್ ಬಾನು ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ನಿಲಯದ ಪ್ರತಿನಿತ್ಯದ ಊಟದಲ್ಲಿ ಹುಳುಗಳು ಇರುವ ಗೋಧಿ ಹಿಟ್ಟು, ಅರೆ ಬೆಂದ ಚಪಾತಿ, ನೀರಿನಂತಿರುವ ಸಾಂಬಾರು, ಕೊಳೆತು ಹೋದ ತರಕಾರಿ, ಪಲ್ಯ ಬೇಕಾಬಿಟ್ಟಿಯಾಗಿ ಸಾಂಬಾರಿನಲ್ಲಿ ಹಾಕಲಾಗುತ್ತಿದೆ. ಇದರಿಂದಾಗಿ ಅನೇಕ ಬಾರಿ ಊಟ ಮಾಡದೆ ಮಲಗಿದ್ದೇವೆ, ವೇಳಾಪಟ್ಟಿ ಪ್ರಕಾರ ಆಹಾರ ನೀಡದೆ ಸರ್ಕಾರದ ಆದೇಶ ದುರುಪಯೋಗ, ದಿನಪತ್ರಿಕೆ ಹಾಗೂ ಆಟದ ಸಾಮಗ್ರಿಗಳಿಂದ ವಂಚಿತ, ಶುಚಿ (ಪ್ಯಾಡ್) ವಿತರಿಸಿಲ್ಲ, ಹಾಸ್ಟೆಲ್ ನಲ್ಲಿ ಸೋಲಾರ್ ಗಳು ಇದ್ದರೂ ಇಲ್ಲದಂತಾಗಿದ್ದು ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತಣ್ಣೀರಿನ ಸ್ನಾನವೇ ಗತಿಯಾಗಿದೆ.
ನೀರನ್ನು ಸಂಸ್ಕರಿಸದೆ ಅಡುಗೆಗೆ ಬಳಕೆ, ಹಾಸ್ಟೆಲ್‌ನಲ್ಲಿ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ಪರದೆಗಳು ಇಲ್ಲದೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಹೈಟೆಕ್ ಕಂಪ್ಯೂಟರ್ ಹಾಗೂ ಕಲಿಕೆಯ ಬೋರ್ಡುಗಳು, ಪುಸ್ತಕಗಳು ವಸತಿ ನಿಲಯದ ಮಕ್ಕಳಿಗೆ ಕಲಿಕೆ ಭಾಗ್ಯ ಸಿಗದೇ ವಸತಿ ನಿಲಯದ ಒಂದು ಕೊಠಡಿಯಲ್ಲಿ ಧೂಳು ತಿನ್ನುತ್ತಿವೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಈ ಬಗ್ಗೆ ಗಮನ ಹರಿಸದೆ ಹಾಯಾಗಿರುವ ಹಾಸ್ಟೆಲ್ ವಾರ್ಡನ್ ನ ದಿವ್ಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳು ತಕ್ಕ ಪಾಠ ಕಲಿಸಬೇಕಿದೆ.
PublicNext
02/09/2025 12:09 pm