", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/405356-1756532863-bja.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Durgesh Maski" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಸ್ಕಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದ ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ (ಜೆಜೆಎಂ) ಮನೆಮನೆಗೆ ಗಂಗೆ ಯೋಜನೆಯಡಿ ತಾಲೂಕಿನಾದ್ಯಂತ ನಾನ...Read more" } ", "keywords": "Maski JJM construction issues, public inconvenience, road construction problems, JJM work delays, public transportation woes.", "url": "https://dashboard.publicnext.com/node" }
ಮಸ್ಕಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದ ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ (ಜೆಜೆಎಂ) ಮನೆಮನೆಗೆ ಗಂಗೆ ಯೋಜನೆಯಡಿ ತಾಲೂಕಿನಾದ್ಯಂತ ನಾನಾ ಗ್ರಾಮಗಳಲ್ಲಿ ಕೈಗೊಂಡಿರುವ ಕಾಮಗಾರಿ ಹಲವೆಡೆ ಅಪೂರ್ಣವಾಗಿದೆ. ಇದಕ್ಕೆ ಉದಾಹರಣೆಯಾಗಿ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮ ಪಂಚಾಯತಿಯ ಗುಡಿಹಾಳ ಗ್ರಾಮದಲ್ಲಿ ಎರಡುವರೆ ವರ್ಷಗಳಿಂದ ಜಲ ಜೀವನ್ ಮಿಷನ್ ಯೋಜನೆಯು ಅರ್ಧದಲ್ಲಿ ಸ್ಥಗಿಗೊಂಡಿದ್ದು ಗುಡಿಹಾಳ ಗ್ರಾಮದಲ್ಲಿ ಸರಿಸುಮಾರು 2,500ಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಒಟ್ಟು 321 ಮನೆಗಳಿಗೆ 1 ಕೋಟಿ 37 ಲಕ್ಷ ವೆಚ್ಚದಲ್ಲಿ ಜಲಜೀವನ್ ಈ ಯೋಜನೆಯನ್ನು ರೂಪಿಸಲಾಗಿದೆ ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಗಳ ನಿರ್ಲಕ್ಷದಿಂದ ಎರಡುವರೆ ವರ್ಷಗಳಿಂದ ಕಾಮಗಾರಿ ಮುಗಿಯದೆ ನೆನೆಗುದಿ ಬಿದ್ದಿದ್ದು. ಇನ್ನು ಗುತ್ತಿಗೆದಾರರು ಗ್ರಾಮದಲ್ಲಿ ಸಿ.ಸಿ ರಸ್ತೆಯನ್ನು ಅಗೆದು ಹಾಗೆ ಬಿಟ್ಟು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಮಳೆಯ ನೀರು ಹಾಗೂ ಸಾರ್ವಜನಿಕರ ಬಳಕೆಯ ನೀರು ರಸ್ತೆಯಲ್ಲಿ ನಿಲ್ಲುವುದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ.ಪೈಪ್‌ಲೈನ್ ಹಾಕಲು ತೆಗೆದ ತಗ್ಗು ಮುಚ್ಚುವರು ದಿಕ್ಕಿಲ್ಲದೇ. ಕತ್ತಲಾದರೆ ಎಡವಿ ಬಿದ್ದು ಗಾಯಗೊಳ್ಳುವ ಜನ, ಆಯತಪ್ಪಿ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿರುವ ಬೈಕ್ ಸವಾರರು.
ಇನ್ನು ಜೆಜೆ ಎಂ ಕಾಮಗಾರಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರರಿಗೆ ಹಾಗೂ ಇಂಜಿನಿಯರ್ ಗಳಿಗೆ ದೂರವಾಣಿ ಸಂಪರ್ಕದ ಮೂಲಕ ಸಂಪರ್ಕಿಸಿದರು ಯಾವುದೇ ರೀತಿಯ ಸ್ಪಂದನೆ ಮಾಡದೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ವರದಿ: ದುರ್ಗೇಶ್ ಹಸಮಕಲ್ ಮಸ್ಕಿ
PublicNext
30/08/2025 11:22 am