", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/286525-1757046568-WhatsApp-Image-2025-09-05-at-9.59.14-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Durgesh Maski" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಸ್ಕಿ: ತಾಲೂಕಿನ ಗೌಡನ ಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾಗರ ಕ್ಯಾಂಪ್ ಹಾಗೂ ನಾಗರೆಡ್ಡಿ ಕ್ಯಾಂಪಿನ ಎನ್ನುವ ಗ್ರಾಮಗಳಲ್ಲಿ 1200 ಮ...Read more" } ", "keywords": " Maski cremation ground land shortage, funeral crisis, lack of burial space, Maski news, crematorium issues, land scarcity for cremation, funeral difficulties, Raichur district news. ", "url": "https://dashboard.publicnext.com/node" }
ಮಸ್ಕಿ: ತಾಲೂಕಿನ ಗೌಡನ ಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾಗರ ಕ್ಯಾಂಪ್ ಹಾಗೂ ನಾಗರೆಡ್ಡಿ ಕ್ಯಾಂಪಿನ ಎನ್ನುವ ಗ್ರಾಮಗಳಲ್ಲಿ 1200 ಮತಗಳಿದ್ದು 3000 ಕ್ಕೂ ಅಧಿಕ ಜನ ವಾಸಿಸುವಂತಹ ಗ್ರಾಮಗಳಾಗಿವೆ. ಯಾವುದೇ ಸಮುದಾಯ, ಜಾತಿ, ಲಿಂಗವಿದ್ದರೂ ಮರಣಾನಂತರ ಆ ವ್ಯಕ್ತಿಗೆ ಅತ್ಯಂತ ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸಬೇಕು ಎನ್ನುವುದು ಆಯಾ ಕುಟುಂಬಗಳ ಮತ್ತು ಬಂಧುಗಳ ಸಹಜ ಆಸೆ.
ಆದರೆ ಮಸ್ಕಿ ತಾಲೂಕಿನ ಗೌಡನ ಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾಗರ ಕ್ಯಾಂಪ್ ಹಾಗೂ ನಾಗರೆಡ್ಡಿ ಕ್ಯಾಂಪ್ ಈ ಎರಡು ಗ್ರಾಮಗಳಲ್ಲಿ ಎಲ್ಲಾ ಜನಾಂಗದವರ ನಡುವೆ ಒಂದು ಸ್ಮಶಾನ ಭೂಮಿ ಇದ್ದು ಅದು ಕೇವಲ ಅರ್ಧ ಎಕರೆ ಪ್ರದೇಶದಲ್ಲಿ ಇದೆ ಸುಮಾರು ವರ್ಷಗಳಿಂದ ಈ ಎರಡು ಗ್ರಾಮದ ಎಲ್ಲಾ ಜನಾಂಗದವರಲ್ಲಿ ಯಾರಾದರೂ ಒಬ್ಬರು ಸತ್ತರೆ ಅವರನ್ನು ಊಳಿದ ಜಾಗದಲ್ಲೇ ಕೇಳಬೇಕಾಗಿದೆ. ಇನ್ನೂ ಇರುವಂತಹ ಅರ್ಧ ಎಕರೆ ಪ್ರದೇಶದ ಸ್ಮಶಾನ ಭೂಮಿಗೆ ತೆರಳಲು ಸುಸಜ್ಜಿತವಾದ ರಸ್ತೆ ಇಲ್ಲದೆ ಹಾಗೆ ಸುಮಾರು ಒಂದು ಕಿಲೋಮೀಟರ್, ಭತ್ತ ಬೆಳೆಯುವಂತಹ ಕೆಸರಿನ ಗದ್ದೆಯಲ್ಲೇ ಹೆಣವನ್ನು ಓರುವ ಪರಿಸ್ಥಿತಿ ನಿರ್ಮಾಣವಾಗಿದ್ದು. ಭತ್ತ ಬೆಳೆದಂತಹ ಸಮಯದಲ್ಲಿ ಖಾಸಗಿ ಜಮೀನಿನ ರೈತರು ಬೆಳೆ ಇರುವ ಕಾರಣ ಬೆಳೆ ಹಾಳಾಗುತ್ತಿದೆ ಎಂದು ಸಾರ್ವಜನಿಕರ ವಿರುದ್ಧ ಆಕ್ರೋಶ ತೋರುತ್ತಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಎಲ್ಲಾ ಸಮುದಾಯದ ಸಾರ್ವಜನಿಕರಿಗೆ ಸ್ಮಶಾನ ಭೂಮಿಯನ್ನು ಕೊಡಿಸಿ ಹಾಗೂ ಅದಕ್ಕೆ ಸೂಕ್ತವಾದ ರಸ್ತೆಯನ್ನು ಒದಗಿಸಬೇಕು ಎಂದು ಎರಡು ಗ್ರಾಮದ ಎಲ್ಲಾ ಸಮುದಾಯದ ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ: ದುರ್ಗೇಶ್ ಹಸಮಕಲ್ ಮಸ್ಕಿ
PublicNext
05/09/2025 09:59 am