ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಶುದ್ಧೀಕರಣಗೊಂಡ ನೀರು ಪೂರೈಸುವಲ್ಲಿ ನಗರಸಭೆ ವಿಫಲ

ಹಾವೇರಿ: ಹಾವೇರಿ ನಗರಸಭೆ ನಗರಕ್ಕೆ ನೀರು ಪೂರೈಸುವ ಜಲ ಶುದ್ಧೀಕರಣ ಘಟಕ ರಿಪೇರಿ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸೂಚನೆ ನೀಡಿತ್ತು. ಅಲ್ಲದೆ, ಇದೇ 13ರಿಂದ 17ರ ವರೆಗೆ ನದಿಯ ನೀರನ್ನು ಶುದ್ಧೀಕರಣಗೊಳಿಸದೇ ನೇರವಾಗಿ ಪೂರೈಕೆ ಮಾಡುವ ಕಾರಣ ನೀರನ್ನು ಕುಡಿಯಲು ಬಳಸದಂತೆ ಎಚ್ಚರಿಕೆ ನೀಡಿತ್ತು.

ನಗರಸಭೆ ಆಗಸ್ಟ್ 17 ಇರಲಿ‌, ಆಗಸ್ಟ್ 29 ಆದರೂ ಜಲಶುದ್ಧೀಕರಣ ರಿಪೇರಿ ಮಾಡುವಲ್ಲಿ ವಿಫಲವಾಗಿದೆ. ಪರಿಣಾಮ ಹಾವೇರಿ ನಿವಾಸಿಗಳು ಶುದ್ಧೀಕರಣಗೊಳ್ಳದ ನೀರು ಬಳಸಿ ಹಲವು ರೋಗಗಳನ್ನು ಅನುಭವಿಸುತ್ತಿದ್ದಾರೆ ಎಂದು ನಗರ ನಿವಾಸಿಗಳು ಆರೋಪಿಸಿದ್ದಾರೆ.

ಜಲಶುದ್ಧೀಕರಣ ಘಟಕಕ್ಕೆ ಬರುವ ನದಿಯ ನೀರು ಈಗಲೂ ಸಹ ಸರಿಯಾಗಿ ಶುದ್ಧೀಕರಣವಾಗುತ್ತಿಲ್ಲ ಎಂದು ಹಾವೇರಿ ನಾಗರಿಕರು ಆರೋಪಿಸಿದ್ದಾರೆ. ಸರಿಯಾದ ಹಾಲಮ್ ಹಾಕುವುದಿಲ್ಲ, ಕ್ಲೋರಿನ್ ಟ್ರೀಟ್‌ ಮೆಂಟ್ ಇಲ್ಲ. ಅಲ್ಲದೆ, ಟಿಡಿಎಸ್ ಸಹ ಚೆಕ್ ಮಾಡದೇ ನಗರಕ್ಕೆ ನೀರು ಪೂರೈಕೆ ಆರಂಭಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆರೋಪ ನಿರಾಕರಿಸಿರುವ ನಗರಸಭೆ ಅಧ್ಯಕ್ಷೆ ಶಶಿಕಲಾ, ನಗರದ ಜನತೆಗೆ ಕುಡಿಯಲು ಯೋಗ್ಯವಾದ ನೀರು ಪೂರೈಸುತ್ತಿರುವುದಾಗಿ ತಿಳಿಸಿದ್ದಾರೆ.

Edited By : Vinayak Patil
PublicNext

PublicNext

30/08/2025 07:53 am

Cinque Terre

22.06 K

Cinque Terre

0

ಸಂಬಂಧಿತ ಸುದ್ದಿ