ಹಾವೇರಿ: 133 ವರ್ಷ ಇತಿಹಾಸವಿರುವ ಹಾವೇರಿ ನಗರದ ಮುನ್ಸಿಪಲ್ ಪ್ರೌಢಶಾಲೆ ಕಟ್ಟಡ ಇದೀಗ ಹಾಳಾಗಲಾರಂಭಿಸಿದೆ. ಕಟ್ಟಡ ಎಲ್ಲೆಂದರಲ್ಲಿ ಜೌಗು ಹಿಡಿದಿದ್ದು ಪಾಚಿ ಕಟ್ಟಿಕೊಂಡಿದೆ.
ಬಹುತೇಕ ಕೊಠಡಿಗಳ ಮೇಲ್ಛಾವಣಿ ಹಂಚುಗಳು ಒಡೆದಿವೆ. ಪರಿಣಾಮ ಮಳೆ ಬಂದರೆ ಸಾಕು ಈ ಶಾಲೆಯ ವಿದ್ಯಾರ್ಥಿಗಳು ಸೋರುತ್ತಿರುವ ಕೊಠಡಿಗಳಲ್ಲಿ ವಿದ್ಯಾಭ್ಯಾಸ ಮಾಡುವ ಅನಿವಾರ್ಯತೆ ಎದುರಾಗಿದೆ.
ನಗರಸಭೆ ಅಧೀನದಲ್ಲಿರುವ ಈ ಶಾಲೆಗೆ ಪ್ರತಿವರ್ಷ ಸಣ್ಣಪುಟ್ಟ ರಿಪೇರಿಗಾಗಿ ಅನುದಾನ ತೆಗೆದಿದ್ದಾರೆ. ಅಲ್ಲದೆ ಕೆಲವೊಮ್ಮೆ ಅನುದಾನ ತೆಗೆದರೂ ಅದರ ಸದುಪಯೋಗವಾಗಿಲ್ಲ ಎಂಬ ಆರೋಪ ಸಹ ಕೇಳಿಬಂದಿದೆ. ಈ ಕುರಿತಂತೆ ಹಾವೇರಿ ನಗರಸಭೆ ಅಧ್ಯಕ್ಷ್ಯೆ ಶಶಿಕಲಾ ಮಾಳಗಿ ಕೇಳಿದರೆ ಅವರು ಹೇಳುವುದು ಬೇರೆ.
PublicNext
31/08/2025 10:57 am