ಶಿರಸಿ: ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯಲ್ಲಿ ಡಿ. ಜೆ ದ್ವನಿವರ್ಧಕ ಬಳಸದೆ ಸಾಂಪ್ರದಾಯಿಕವಾಗಿ, ಶಾಂತಿಯುತ ಮತ್ತು ಶಿಸ್ತುಬದ್ದವಾಗಿ ಆಚರಣೆ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಿದ ನಗರದ ಶ್ರದ್ದಾನಂದಗಲ್ಲಿಯ ಕೇಸರಿಸುತ ಯುವಕ ಮಂಡಳಿಗೆ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಸಿಹಿ ನೀಡಿ ಅಭಿನಂದನಾ ಪತ್ರ ನೀಡಿದರು.
ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ಹಾಗೂ ಸಿಬ್ಬಂದಿಗಳು ಮತ್ತು ಯುವಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
Kshetra Samachara
30/08/2025 11:52 am