", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/474799-1757213147-NEWS-05.5.02_04_32_11.Still035.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರವಾರ: ರವಿವಾರ ರಕ್ತ ಚಂದ್ರಗ್ರಹಣ ಸಂಭವಿಸುತಿದ್ದು ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಚಂದ್ರ ಗ್ರಹಣದ ಪ...Read more" } ", "keywords": "karwar, lunar eclipse, gokarna temple, darshan time change, religious rituals, temple schedule, karwar news, kannada headline ", "url": "https://dashboard.publicnext.com/node" } ಕಾರವಾರ: ಚಂದ್ರ ಗ್ರಹಣ.. ಗೋಕರ್ಣ ದೇವಸ್ಥಾನದಲ್ಲಿ ದೇವರ ದರ್ಶನ ಸಮಯ ಬದಲಾವಣೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಚಂದ್ರ ಗ್ರಹಣ.. ಗೋಕರ್ಣ ದೇವಸ್ಥಾನದಲ್ಲಿ ದೇವರ ದರ್ಶನ ಸಮಯ ಬದಲಾವಣೆ

ಕಾರವಾರ: ರವಿವಾರ ರಕ್ತ ಚಂದ್ರಗ್ರಹಣ ಸಂಭವಿಸುತಿದ್ದು ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಚಂದ್ರ ಗ್ರಹಣದ ಪ್ರಯುಕ್ತ ಮಹಾಬಲೇಶ್ವರ ಮಂದಿರದಲ್ಲಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಇದಲ್ಲದೇ ಮಂದಿರದಿಂದ ನೀಡುವ ಎರಡು ಹೊತ್ತಿನ ಪ್ರಸಾದ ಭೋಜನದ ವ್ಯವಸ್ಥೆಯಲ್ಲಿ ಈ ದಿನದಂದು ಸಂಜೆ ಭೋಜನದ ವ್ಯವಸ್ಥೆ ಇರುವುದಿಲ್ಲ .ದೇವರ ದರ್ಶನಕ್ಕೆ ಬರುವ ಭಕ್ತರು ಬೆಳಗ್ಗೆ 10-45 ಗಂಟೆಯ ತನಕ ಮಾತ್ರ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿದ್ದು, ನಂತರ ಮಧ್ಯಾಹ್ನ 12.30 ಗಂಟೆಯ ಒಳಗೆ ಮಹಾಪೂಜೆ ನಡೆಯಲಿದೆ.

ಸಂಜೆ 4.00 ಗಂಟೆಯಿಂದ 5.30 ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ನಂತರ ಏಳು ಗಂಟೆಯ ಒಳಗೆ ಮಹಾಪೂಜೆ ನೆರವೇರಿಸಿ ದೇವಾಲಯ ಮುಚ್ಚಲಾಗುತ್ತೆ. ಗ್ರಹಣ ಕಾಲದ ರಾತ್ರಿ 9.45ರಿಂದ ಮಧ್ಯರಾತ್ರಿ 1-26ರರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗ್ರಹಣ ಮೋಕ್ಷದ ಬಳಿಕ ದೇವಾಲಯ ಶುಚಿಯಾಗಿಸಿ ವಿಶೇಷ ಪುಣ್ಯಾಹ ನೆರವೇರುವುದರೊಂದಿಗೆ ದೇವಾಲಯ ಮುಚ್ಚಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Edited By :
Kshetra Samachara

Kshetra Samachara

07/09/2025 08:15 am

Cinque Terre

13.84 K

Cinque Terre

0

ಸಂಬಂಧಿತ ಸುದ್ದಿ