", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/286525-1756908655-WhatsApp-Image-2025-09-03-at-7.38.17-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರವಾರ: ಉತ್ತರ ಕನ್ನಡ ಜಿಲ್ಲೆ ಕೋಮು ಸೌಹಾರ್ದತೆಗೆ ಹೆಸರಾದ ಜಿಲ್ಲೆ. ಕರಾವಳಿಯಲ್ಲಿ ಕೆಲವು ಕಡೆ ಕೋಮು ದ್ವೇಷ ಇದ್ದಿದ್ದು ಬಿಟ್ರೆ ಇನ್ನುಳಿದ ಕಳ...Read more" } ", "keywords": "Communal harmony Ganesh, Karwar, Konkanvad, no communal hatred, Ganesh Chaturthi celebrations, community unity, religious tolerance, Karwar news, Ganesh festival, peace and harmony.", "url": "https://dashboard.publicnext.com/node" }
ಕಾರವಾರ: ಉತ್ತರ ಕನ್ನಡ ಜಿಲ್ಲೆ ಕೋಮು ಸೌಹಾರ್ದತೆಗೆ ಹೆಸರಾದ ಜಿಲ್ಲೆ. ಕರಾವಳಿಯಲ್ಲಿ ಕೆಲವು ಕಡೆ ಕೋಮು ದ್ವೇಷ ಇದ್ದಿದ್ದು ಬಿಟ್ರೆ ಇನ್ನುಳಿದ ಕಳೆದ ಕೋಮು ಸೌಹಾರ್ದತೆ ಕಾಪಾಡುವಲ್ಲಿ ಹಿಂದು- ಮುಸ್ಲಿಂ ಧರ್ಮದ ಜನ ಮುಂದೆ ಇದ್ದಾರೆ. ಇದಕ್ಕೆ ಈಗ ಉದಾಹರಣೆಯಾಗಿ ಕಳೆದ 25 ವರ್ಷದಿಂದ ಕಾರವಾರದ ಕೋಣೆವಾಡದಲ್ಲಿ ಹಿಂದು ಮತ್ತು ಮುಸ್ಲಿಮ್ ಧರ್ಮೀಯರು ಒಂದಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಒಂಬತ್ತು ದಿನಗಳ ಕಾಲ ಪೂಜಿಸಿ ವಿಸರ್ಜನೆ ಮಾಡುತ್ತಾರೆ. ಗಣೇಶೋತ್ಸವ ಸಮಿತಿಗೆ ಇಲ್ಲಿ ಮುಸ್ಲಿಂ ಸಮುದಾಯದವರೇ ಪದಾಧಿಕಾರಿಗಳು ಇಲ್ಲಿ ಯಾವುದೆ ಬೇಧಭಾವ ಇಲ್ಲ.
ಇನ್ನು ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಒಂದೆ ತಿಂಗಳಲ್ಲಿ ಆಚರಣೆಗೆ ಬರೋದ್ರಿಂದ ಈದ್ ಮಿಲಾದ್ ಹಬ್ಬದ ಉಸ್ತುವಾರಿ ಕಮಿಟಿಗೆ ಹಿಂದು ಧರ್ಮಿಯರು ಪದಾಧಿಕಾರಿಗಳು, ಹೀವೆ ಸಾಮರಸ್ಯದಿಂದ ಇಲ್ಲಿ ಈದ್ ಮಿಲಾದ್ ಹಬ್ಬ ಮತ್ತು ಗಣೇಶೋತ್ಸವ ವನ್ನ ಆಚರಣೆ ಮಾಡುತ್ತಾರೆ, ಕಳೆದ 25ವರ್ಷದಲ್ಲಿ ಒಂದೆ ಒಂದು ಗಲಾಟೆ ಆದ ಬಗ್ಗೆಯೂ ಉದಾಹರಣೆ ಇಲ್ಲ ಅಂತೆ, ಯಾರೆ ಕೂಡಾ ಇಲ್ಲಿ ಕೋಮು ವೈಷ್ಯಮ ಹರಡಲು ಬಂದ್ರೆ ಅವರಿಗೆ ತಾವೆಲ್ಲ ಒಂದು ಎನ್ನುವ ಮೂಲಕ ಒದ್ದು ಓಡಿಸಿದ ಉದಾಹರಣೆ ಕೂಡಾ ಇದೆ. ಗಣೇಶೋತ್ಸವಕ್ಕೆ ಮಾತ್ರ ಭಾರೀ ಬೆಲೆಕೊಟ್ಟು ಹಬ್ಬ ಸಂಭ್ರಮಿಸಿ ಅನ್ನ ಪ್ರಸಾದ ಕೂಡಾ ವಿತರಿಸುತ್ತಾರೆ.
ಒಟ್ಟಾರೆ ಕೋಮು ವೈಷ್ಯಮೆತೆಯಿಂದ ಬೆಂದು ಬೇಯುತ್ತಿರುವ ಈಗಿನ ದಿನದಲ್ಲಿ ಕಾರವಾರ ಕೋಣೆವಾಡದ ಹಿಂದು ಮುಸ್ಲಿಂ ಜನರು ಮಾತ್ರ ಗ್ರೇಟ್ .
-ಪ್ರವೀಣ್ ಹೊಸಂತೆ. ಪಬ್ಲಿಕ್ ನೆಕ್ಸ್ಟ್ ಕಾರವಾರ
PublicNext
03/09/2025 07:42 pm