", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/463655-1756559471-manjunath---2025-08-30T184101.497.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದಾವಣಗೆರೆ: ಗಣೇಶೋತ್ಸವ ವೇಳೆ ಡಿ. ಜೆ ಬಳಕೆ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಹಾಗೂ ರಸ್ತೆಯಲ್ಲಿ ವಾಹನ ಸ...Read more" } ", "keywords": "MP Renukacharya FIR, Davanagere news, BJP leader controversy, DJ ban defiance case, Karnataka police action, Renukacharya protest, Ganesh idol immersion controversy ", "url": "https://dashboard.publicnext.com/node" } ದಾವಣಗೆರೆ : ಎಂ. ಪಿ. ರೇಣುಕಾಚಾರ್ಯ ವಿರುದ್ಧ FIR ದಾಖಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಎಂ. ಪಿ. ರೇಣುಕಾಚಾರ್ಯ ವಿರುದ್ಧ FIR ದಾಖಲು

ದಾವಣಗೆರೆ: ಗಣೇಶೋತ್ಸವ ವೇಳೆ ಡಿ. ಜೆ ಬಳಕೆ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಹಾಗೂ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹಾಗೂ ಅವರ ಬೆಂಬಲಿಗರ ವಿರುದ್ಧ ನಗರದ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

'ಯುವಕರು ಡಿ. ಜೆ. ಬಳಕೆ ನಿಷೇದಾಜ್ಞೆ ಉಲ್ಲಂಘಿಸಿ' ಎಂದು ಕರೆ ನೀಡಿದ್ದಲ್ಲದೆ, 'ತಾಕತ್ತಿದ್ದರೆ ಪೊಲೀಸರು, ಜಿಲ್ಲಾಡಳಿತ ಅದನ್ನು ತಡೆಯಲಿ' ಎಂದು ಸವಾಲು ಹಾಕಿದ್ದ ಎಂ. ಪಿ. ರೇಣುಕಾಚಾರ್ಯ ವಿರುದ್ಧ ಪೊಲೀಸರು ಶುಕ್ರವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮುಗಿಯುವವರೆಗೂ ಜಿಲ್ಲೆಯಾದ್ಯಂತ ಡಿ. ಜೆ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿಯ ಆದೇಶ ವಿರೋಧಿಸಿ ಎಂ. ಪಿ. ರೇಣುಕಾಚಾರ್ಯ ಅವರು ಕೆಲ ದಿನಗಳಿಂದ ನಿರಂತರವಾಗಿ ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬೆಂಬಲಿಗರೊಂದಿಗೆ ಸೇರಿ ಹಲವು ಬಾರಿ ಪ್ರತಿಭಟನೆಯನ್ನೂ ನಡೆಸಿದ್ದರು.

ಸುಪ್ರೀಂ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಬೇರೆ ಧರ್ಮದವರು ಮೈಕ್ ನಲ್ಲಿ ಆಜಾನ್ ಕೂಗುವುದನ್ನೂ, ರಸ್ತೆ ಬಂದ್‌ ಮಾಡಿ ನಮಾಜ್ ಮಾಡುವುದನ್ನೂ ತಡೆಯಲಿ ಎಂದು ಸವಾಲು ಎಸೆದಿದ್ದರು.

Edited By :
PublicNext

PublicNext

30/08/2025 06:41 pm

Cinque Terre

10.56 K

Cinque Terre

0

ಸಂಬಂಧಿತ ಸುದ್ದಿ