ಮೈಸೂರು : ಆಸ್ತಿ ವಿಚಾರಕ್ಕೆ ಅಣ್ಣನನ್ನೇ ತಮ್ಮ ಕೊಂದಿರುವ ಘಟನೆ ಮೈಸೂರು ತಾಲೂಕಿನ ಆನಂದೂರಿನಲ್ಲಿ ನಡೆದಿದೆ. 43 ವರ್ಷದ ತಮ್ಮ ರವಿಯಿಂದ 45 ವರ್ಷದ ಅಣ್ಣ ಮಹೇಶ್ ಭೀಕರವಾಗಿ ಹತ್ಯೆಯಾಗಿದ್ದಾನೆ. ಅದುವೆ 6 ಕುಂಟೆ ಜಾಗಕ್ಕಾಗಿ ಅನ್ನೋದು ವಿಪರ್ಯಾಸ.
ಹೌದು, ಈ ಭೀಕರ ಹತ್ಯೆ ನಡೆದಿರೋದು 6 ಕುಂಟೆ ಜಾಗಕ್ಕಾಗಿ. ಹೌದು, ತಂದೆ ಕೃಷ್ಣೇಗೌಡ ಸ್ವಯಾರ್ಜಿತ ಜಾಗವನ್ನ ತಂದೆ ಹಿರಿಯ ಮಗನ ಹೆಸರಿಗೆ ಬರೆಯಲಾಗಿತ್ತು. ಕಾರಣ, ನನ್ನ ಮುಂದಿನ ಜೀವನ ಎಲ್ಲ ಹಿರಿಯ ಮಗ ನೋಡಿಕೊಳ್ತಾನೆಂದು. ಆದರೆ ಇದನ್ನ ಕಿರಿ ಮಗ ಪ್ರಶ್ನೆ ಮಾಡಿ ಕುಪಿತಗೊಂಡಿದ್ದಾನೆ. ಈ ವೇಳೆ ಅಡ್ಡ ಬಂದ ತಂದೆ ಹಾಗೂ ಅತ್ತಿಗೆ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಅಣ್ಣನಿಗೆ ಮಚ್ಚಿನಿಂದ ಹಲ್ಲೆ ಮಾಡಿ ಅಣ್ಣ ಕುಸಿದು ಬಿದ್ದು ತಕ್ಷಣವೇ ಪ್ರಾಣ ಬಿಟ್ಟಾಗ ತಮ್ಮ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಸದ್ಯ ಘಟನಾ ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಮಹೇಶ್ ಪತ್ನಿ ಹಾಗೂ ತಂದೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
03/09/2025 07:57 am