", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/474798-1756874738-yutube1920.00_08_03_13.Still3662.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಗಣೇಶ ವಿಸರ್ಜನೆ ವೇಳೆ ಯುವಕನೋರ್ವ ಕರೆಂಟ್ ಶಾಕ್‌ಗೆ ಬಲಿಯಾಗಿದ್ದಾನೆ. ಶುಭಂ ಸಂಕಳ (21) ಮೃತ ದುರ್ದೈವಿ. ಈ ಘಟನೆ ವಿಜಯಪುರದ ಟಾಂಗಾ...Read more" } ", "keywords": "Vijayapura Ganesh Visarjan, Ganesh Visarjan accident, Vijayapura news today, youth electrocuted Ganesh immersion, Ganesh festival tragedy, Ganesh Visarjan death news, Karnataka festival accident, electrical shock during Ganesh Visarjan, Vijayapura youth dies, Ganesh immersion 2025 accident, current shock during festival, festival safety Karnataka, Ganesh idol immersion mishap", "url": "https://dashboard.publicnext.com/node" }
ವಿಜಯಪುರ: ಗಣೇಶ ವಿಸರ್ಜನೆ ವೇಳೆ ಯುವಕನೋರ್ವ ಕರೆಂಟ್ ಶಾಕ್‌ಗೆ ಬಲಿಯಾಗಿದ್ದಾನೆ.
ಶುಭಂ ಸಂಕಳ (21) ಮೃತ ದುರ್ದೈವಿ. ಈ ಘಟನೆ ವಿಜಯಪುರದ ಟಾಂಗಾ ಸ್ಟ್ಯಾಂಡ್ ಬಳಿ ನಡೆದಿದೆ.
ನಗರದ ಡೋಬಲೆ ಗಲ್ಲಿಯ ನಿವಾಸಿ ಶುಭಂ, ನಿನ್ನೆಯ ಗಣೇಶ ವಿಸರ್ಜನೆ ಸಂದರ್ಭ ನೂರಾರು ಮೂರ್ತಿಗಳನ್ನು ಸಾಗಿಸುತ್ತಿರುವ ವೇಳೆ, ಕೋಲಿನಿಂದ ವಿದ್ಯುತ್ ತಂತಿ ಮೇಲೆತ್ತಲು ಹೋಗಿ ಆ ತಂತಿಯಿಂದ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದ್ದು, ಸ್ಥಳದಲ್ಲೇ ಯುವಕ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತು ಡಿವೈಎಸ್‌ಪಿ ಬಸವರಾಜ ಯಲಿಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
PublicNext
03/09/2025 10:19 am