", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/474798-1756884631-nettaru.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀ...Read more" } ", "keywords": "Vijayapura firing incident, Bheema river shooting, Gram Panchayat president murder, Vijayapura crime news, Karnataka village shooting, Bheema river murder case, Panchayat leader shot dead, Vijayapura violence 2025, Karnataka political murder, rural Karnataka crime, Vijayapura latest news, Bheema river gunfire, Vijayapura Gram Panchayat news", "url": "https://dashboard.publicnext.com/node" }
ವಿಜಯಪುರ: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮನಗೌಡ ಬಿರಾದಾರ್ ಮೇಲೆ ಪೈರಿಂಗ್ ನಡೆದಿದೆ.
ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್ ನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಭೀಮನಗೌಡ ಬಿರಾದಾರ್ ಬಂದಿದ್ದರು. ಈ ವೇಳೆ ದುಷ್ಕರ್ಮಿಗಳು ಕಟಿಂಗ್ ಮಾಡುವನ ಕಣ್ಣಿಗೆ ಖಾರದ ಪುಡಿ ಎರಚಿ ಭೀಮನಗೌಡ ಬಿರಾದಾರ್ ಮೇಲೆ ಮೂರು ಸುತ್ತು ಪೈರಿಂಗ್ ಮಾಡಿ ಪರಾರಿಯಾಗಿದ್ದಾರೆ. ಇನ್ನೂ ಹತ್ಯೆಯ ಕೃತ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ತಲೆ ಹಾಗೂ ಎದೆಗೆ ಗುಂಡು ತಗುಲಿದ ಹಿನ್ನಲೆಯಲ್ಲಿ ಭೀಮಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೂ ಕೃತ್ಯಕ್ಕೆ ಹಳೆ ವೈಷಮ್ಯವೇ ಕಾರಣ ಎನ್ನಲಾಗಿದೆ.
ಮೃತ ಭೀಮಗೌಡ ಭೀಮಾತೀತದ ಮಹಾದೇವ ಸಾವಕಾರ್ ಬೈರಗೊಂಡ ಪರಮಾಪ್ತನಾಗಿದ್ದರ ಎನ್ನಲಾಗಿದೆ.
ಸದ್ಯ ವಿಜಯಪುರದ ಖಾಸಗಿ ಆಸ್ಪತ್ರೆಗೆ ಬೀಮನಗೌಡನ ಮೃತ ದೇಹವನ್ನ ರವಾನೆ ಮಾಡಲಾಗಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
PublicNext
03/09/2025 01:00 pm