", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1757308746-sab.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಪ್ರಿಯಕರನೊಂದಿಗೆ ಸೇರಿ ರಾತ್ರಿ ಮಲಗಿದ್ದ ತನ್ನ ಗಂಡನನ್ನ ಹೆಂಡತಿಯೇ ಕತ್ತು ಹಿಸುಕಿ ಕೊಲೆಗೆ ಯತ್ನಿಸಿ ವಿಫಲವಾಗಿರುವ ಘಟನೆ ವಿಜಯಪುರ ಜ...Read more" } ", "keywords": "vijayapura wife sketch husband, vijayapura wife lover video leak, vijayapura crime news, wife plans against husband vijayapura, vijayapura viral video case, extramarital affair vijayapura, lover leaks video vijayapura, vijayapura scandal news, wife lover controversy vijayapura, vijayapura latest crime incident", "url": "https://dashboard.publicnext.com/node" }
ವಿಜಯಪುರ: ಪ್ರಿಯಕರನೊಂದಿಗೆ ಸೇರಿ ರಾತ್ರಿ ಮಲಗಿದ್ದ ತನ್ನ ಗಂಡನನ್ನ ಹೆಂಡತಿಯೇ ಕತ್ತು ಹಿಸುಕಿ ಕೊಲೆಗೆ ಯತ್ನಿಸಿ ವಿಫಲವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಕ್ಕಮಹಾದೇವಿ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಗಂಡ ಬೀರಪ್ಪ ಮಾಯಪ್ಪ ಪೂಜಾರಿ (36)ಯ ಜೀವ ತೆಗೆಯಲು ಯತ್ನಿಸಿದ ಹೆಂಡತಿ ಸುನಂದ ಹಾಗೂ ಪ್ರಿಯಕರ ಸಿದ್ದಪ್ಪ ಕ್ಯಾತಕೇರಿ ದುಷ್ಕೃತ್ಯಕ್ಕೆ ಕೈ ಹಾಕಿದವರು. ಸಿದ್ದಪ್ಪ ಕ್ಯಾತಕೇರಿ ಎಂಬಾತನೊಂದಿಗೆ ಸುನಂದ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿ ಮಲಗಿದಾಗ ಗಂಡನ ಜೀವ ತೆಗೆಯಲು ಸುನಂದ ಪ್ಲಾನ್ ಮಾಡಿದ್ದಳು. ಅದರಂತೆ ಸೆಪ್ಟೆಂಬರ್ 1ರಂದು ರಾತ್ರಿ ಗಂಡ ಮಲಗಿದ್ದಾಗ ಪ್ರಿಯಕರನ ಜೊತೆಗೆ ಮತ್ತೊಬ್ಬನನ್ನು ಕರೆಯಿಸಿ ಕೊಲೆಗೆ ಯತ್ನಿಸಿದ್ದಾಳೆ. ಗಂಡನ ಎದೆ ಮೇಲೆ ಕುಳಿತು ಕತ್ತು ಹಿಸುಕಿ, ಮರ್ಮಾಂಗ ಹಿಸುಕಿ ಜೀವ ತೆಗೆಯಲು ಮುಂದಾಗಿದ್ದಾರೆ.
ಕತ್ತು ಹಿಸುಕುವಾಗ ಬೀರಪ್ಪ ಕಾಲಿನಿಂದ ಕೂಲರ್ ಅನ್ನು ಒದ್ದು ಶಬ್ಧ ಮಾಡಿದ್ದಾನೆ. ಶಬ್ಧ ಜೋರಾಗಿದ್ದರಿಂದ ಮನೆ ಮಾಲೀಕರು ಎಚ್ಚರಗೊಂಡಿದ್ದಾರೆ. ಬಳಿಕ ಇವರ ಮನೆ ಬಳಿ ಬಂದು ಮಾಲೀಕ ಬಾಗಿಲು ಬಡಿದಾಗ ಎಚ್ಚರಗೊಂಡು ಬೀರಪ್ಪನ 8 ವರ್ಷದ ಮಗ ಬಾಗಿಲು ತೆರೆದಿದ್ದಾನೆ. ಬಾಗಿಲು ಓಪನ್ ಆಗುತ್ತಿದ್ದಂತೆ ಪ್ರಿಯಕರ ಪರಾರಿಯಾಗಿದ್ದಾನೆ.
ಪರಾರಿಯಾದ ಬಳಿಕ ಸಿದ್ದಪ್ಪ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾನೆ. ಸುನಂದ ಮಾತು ಕೇಳಿ ನಾನು ತಗಲಾಕೊಂಡೆ ಎಂದು ಹೇಳಿದ್ದಾನೆ. ಸದ್ಯ ಸುನಂದಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಪ್ಪಿಸಿಕೊಂಡಿರುವ ಪ್ರಿಯಕರನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಗಾಯಗೊಂಡ ಬೀರಪ್ಪನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೀರಪ್ಪ ಮೂಲತಃ ಅಂಜುಟಗಿ ಗ್ರಾಮದವರು. ಪತ್ನಿ ಸುನಂದ ಅದೇ ಗ್ರಾಮದ ಸಿದ್ದಪ್ಪನ ಜೊತೆಗೆ ಮೊಬೈಲ್ನಲ್ಲಿ ಮಾತಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದಳು. ಒಮ್ಮೆ ಸಿಕ್ಕಿಕೊಂಡಾಗ ಇನ್ನೊಮ್ಮೆ ಹೀಗೆ ಮಾಡಲ್ಲ ಎಂದಿದ್ದ ಹೆಂಡತಿ ಸುನಂದ ಕೊನೆಗೆ ಗಂಡನನ್ನೇ ಮುಗಿಸಲು ದೊಡ್ಡ ಪ್ಲಾನ್ ಮಾಡಿ ಪೊಲೀಸರಿಗೆ ತಗಲಾಕಿಕೊಂಡಿದ್ದಾಳೆ.
PublicNext
08/09/2025 10:49 am