ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣೇಶನಿಗೆ 'ಆಪರೇಷನ್ ಸಿಂಧೂರ' ಟಚ್

ಬೆಳಗಾವಿ: ಬೆಳಗಾವಿ ನಗರದ ಗಣೇಶ ಉತ್ಸವ ಮಂಡಳಿ ಗಣೇಶ ಹಾಗೂ ಮಂಟಪಕ್ಕೆ "ಆಪರೇಷನ್ ಸಿಂಧೂರ" ಟಚ್ ನೀಡಿದ್ದು, ಗಣೇಶನ ಜೊತೆಗೆ ಭಾರತೀಯ ಸೈನಿಕರಿಗೂ ಪೂಜೆ ಸಲ್ಲಿಸುವ ಮೂಲಕ ದೇಶಭಕ್ತಿ ತೋರಲಾಗಿದೆ.

ಒಂದೆಡೆ ಮಂಟಪದ ಹೊರಗೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಮನೆ ಮಾತಾಗಿದ್ದ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಭಾವಚಿತ್ರಗಳು. ಮತ್ತೊಂದೆಡೆ ಮಂಟಪದೊಳಗೆ ಕಾಲಿಡುತ್ತಿದ್ದಂತೆ ಸ್ವಾತಂತ್ರ್ಯ ಸೇನಾನಿಗಳ ದರ್ಶನ. ಇನ್ನು ಗಣೇಶ ಮೂರ್ತಿ ಅಕ್ಕ ಪಕ್ಕದಲ್ಲಿ ಇಬ್ಬರು ಸೈನಿಕರ ಮೂರ್ತಿಗಳು, ಹಿಂಭಾಗದಲ್ಲಿ ಭಾರತಮಾತೆ ಮತ್ತು ಶಿವಾಜಿ ಮಹಾರಾಜರ ಭಾವಚಿತ್ರಗಳು ನೋಡುಗರಲ್ಲಿ ದೇಶಾಭಿಮಾನ ಮೂಡಿಸುತ್ತಿವೆ. ಅದರಲ್ಲೂ ಗಣೇಶನ ಜೊತೆಗೆ ಭಾರತೀಯ ಸೈನಿಕರಿಗೂ ಪೂಜಾ ಕೈಂಕರ್ಯ ನಡೆಯುತ್ತಿದ್ದು, ಭಾರತ್ ಮಾತಾ ಕೀ ಜಯಘೋಷಗಳು ಮೊಳಗುತ್ತಿವೆ. ಇಲ್ಲಿ ಭಕ್ತಿಯ ಜೊತೆಗೆ ದೇಶಾಭಿಮಾನದ ಕಿಚ್ಚು ಮೇಳೈಸಿದೆ.

ಹೌದು, ನೀವು ನೋಡುತ್ತಿರುವ ಈ ಎಲ್ಲ ದೃಶ್ಯಗಳು ಬೆಳಗಾವಿ ಶಾಹಪುರದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಕಾರ್ನರ್ ಸಾರ್ವಜನಿಕ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮಂಟಪದಲ್ಲಿ ಕಂಡು ಬಂತು. ನಮ್ಮ ದೇಶದ ಹೆಮ್ಮೆಯ ಸೈನಿಕರ ಜೊತೆಗೆ ಲೋಕಮಾನ್ಯ ಬಾಲಗಂಗಾಧರ ತಿಲಕ, ಕ್ರಾಂತಿಕಾರಿ ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲ್, ಭಾರತದ ಕೋಗಿಲೆ ಸರೋಜಿನಿ ನಾಯ್ಡು, ನೇತಾಜಿ ಸುಭಾಷಚಂದ್ರ ಬೋಸ್ ಅವರ ಭಾವಚಿತ್ರಗಳನ್ನು‌ ಮಂಟಪದೊಳಗೆ ಪ್ರದರ್ಶಿರುವುದು ವಿಶೇಷ.

ಒಟ್ಟಿನಲ್ಲಿ ಗಡಿಯಲ್ಲಿ ನಿಂತು ತಮ್ಮ ಜೀವದ ಹಂಗು ತೊರೆದು ನಮ್ಮ ಸೈನಿಕರು ನಮ್ಮೆಲ್ಲರನ್ನು ಕಾಪಾಡುತ್ತಾರೆ. ಹಾಗಾಗಿ, ಅವರನ್ನು ಗಣೇಶ ದೇವರು ಕಾಪಾಡಲಿ, ಮತ್ತಷ್ಟು ಶಕ್ತಿ ಅವರಿಗೆ ಕರುಣಿಸಲಿ. ಎಲ್ಲರಿಗೂ ಒಳ್ಳೆಯದು ಆಗಲಿ ಎಂಬುದು ಎಲ್ಲರ ಆಶೆಯ.

ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By : Vinayak Patil
PublicNext

PublicNext

03/09/2025 11:44 am

Cinque Terre

21.82 K

Cinque Terre

0

ಸಂಬಂಧಿತ ಸುದ್ದಿ