", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/474798-1757320987-keama.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಮಹಾರಾಷ್ಟ್ರ ನಾಡಗೀತೆ ಹಚ್ಚಿ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡರು ವಿಕೃತ ಎಸಗಿದ್ದಾರೆ. ...Read more" } ", "keywords": "Belagavi controversy, Maharashtra song dance Belagavi, Belagavi cultural clash, Kannadigas protest, Belagavi Marathi song issue, Karnataka Maharashtra border tension, dance on Maharashtra anthem, Belagavi Kannada pride, cultural protest Belagavi, Kannada vs Marathi issue, Belagavi latest news, Karnataka cultural identity, Belagavi political tension, Maharashtra anthem controversy, Belagavi Kannada organizations protest", "url": "https://dashboard.publicnext.com/node" }
ಬೆಳಗಾವಿ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಮಹಾರಾಷ್ಟ್ರ ನಾಡಗೀತೆ ಹಚ್ಚಿ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡರು ವಿಕೃತ ಎಸಗಿದ್ದಾರೆ.
ಜೈ ಮಹಾರಾಷ್ಟ್ರ ಡಿಜೆ ಸಾಂಗ್ ಹಚ್ಚಿ ಉದ್ಧಟತನ ಪ್ರದರ್ಶನ ಮಾಡಿರೋ ಎಂಇಎಸ್ ಪುಂಡರು, ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಬೆಳಗಾವಿ ನಗರದ ಪಾಟೀಲ್ ಗಲ್ಲಿ ಗಣೇಶ ಮಂಡಳಿ ಮೆರವಣಿಗೆಯಲ್ಲಿ ಈ ಘಟನೆ ನಡೆದಿದೆ.
ಜೈ ಜೈ ಮಹಾರಾಷ್ಟ್ರ ಮಾಂಝಾ ( ನನ್ನ ಮಹಾರಾಷ್ಟ್ರಕ್ಕೆ ಜಯವಾಗಲಿ) ಎಂಬ ಡಿಜೆ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಡಿಜೆ ಸೌಂಡ್ ಸಿಸ್ಟಮ್ ಬಳಸಿ ಪದೇ ಪದೇ ಹಾಡು ಹಾಕಿ ಸ್ಟೆಪ್ ಹಾಕಿ ಕನ್ನಡಿಗರನ್ನು ಕೆಣಕಿರುವ ವಿಡಿಯೋ ಸ್ಥಳೀಯರೊಬ್ಬರು ಮೊಬೈಲ್ ಸೆರೆ ಹಿಡಿದಿದ್ದಾರೆ.
ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಎಂಇಎಸ್ ಪುಂಡರು ನಿರಂತರ ನಾಡದ್ರೋಹಿ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ನಾಡದ್ರೋಹಿ ಕೃತ್ಯ ಎಸಗಿದವರ ವಿರುದ್ಧ ಬೆಳಗಾವಿ ಪೊಲೀಸರು ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಕನ್ನಡಿಗರು ಒತ್ತಾಯಿಸಿದ್ದಾರೆ.
PublicNext
08/09/2025 02:13 pm