", "articleSection": "Crime,Nature,Accident,News", "image": { "@type": "ImageObject", "url": "https://prod.cdn.publicnext.com/s3fs-public/421698-1756885916-04~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UdayKhalghatagi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಘಟಗಿ : ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಕಾರಣ ಅಲ್ಲಿಯ ರೈತರಿಗೆ ಕಾಡುತ್ತಿರುವ ಪ್ರಾಣಿಗಳ ...Read more" } ", "keywords": "Kalaghatagi,Galagihulakoppa village,animal menace,crop damage,worried farmer,local news,Karnataka,wildlife,human-animal conflict,agriculture", "url": "https://dashboard.publicnext.com/node" } ಕಲಘಟಗಿ : ಗಳಗಿಹುಲಕೊಪ್ಪ ಗ್ರಾಮದಲ್ಲಿ ಪ್ರಾಣಿಗಳ ಹಾವಳಿ, ಬೆಳೆ ಧ್ವಂಸ, ಚಿಂತೆಗೀಡಾದ ರೈತ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಗಳಗಿಹುಲಕೊಪ್ಪ ಗ್ರಾಮದಲ್ಲಿ ಪ್ರಾಣಿಗಳ ಹಾವಳಿ, ಬೆಳೆ ಧ್ವಂಸ, ಚಿಂತೆಗೀಡಾದ ರೈತ

ಕಲಘಟಗಿ : ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಕಾರಣ ಅಲ್ಲಿಯ ರೈತರಿಗೆ ಕಾಡುತ್ತಿರುವ ಪ್ರಾಣಿಗಳ ಹಾವಳಿಗೆ ಬೇಸತ್ತು ಹೋಗಿದ್ದಾರೆ.

ಕಾಡು ಹಂದಿಗಳು ರೈತರ ಹೊಲಗಳಲ್ಲಿ ಬೆಳೆದಿರುವ ಗೋವಿನ ಜೋಳ, ಕಬ್ಬು ಬೆಳೆಗಳನ್ನು ಹಾಳು ಮಾಡುತ್ತಿದ್ದು, ಇಲ್ಲಿಯ ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ.

ಅಷ್ಟೇ ಅಲ್ಲದೇ ರೈತರ ಮೇಲೆ ಪ್ರಾಣಿಗಳು ದಾಳಿ ಮಾಡುತ್ತಿದ್ದು, ನಿನ್ನೆ ತಾನೆ ಹಳಿಯಾಳ ತಾಲ್ಲೂಕಿನ ಶಿವಪುರ ಗ್ರಾಮದ ರಾಮಪ್ಪ ಸಂತಿ ಎನ್ನುವ ರೈತನೊಬ್ಬರ ಮೇಲೆ ಕರಡಿ ದಾಳಿ ಮಾಡಿದೆ. ಸಂತ್ರಸ್ತ ರೈತನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಡು ಪ್ರಾಣಿಗಳು ಹಲವಾರು ಬಾರಿ ಈ ಗ್ರಾಮದ ರೈತರ ಮೇಲೆ ದಾಳಿ ಮಾಡಿದ್ದು ರೈತರು ಹೊಲಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಗಳಗಿ ಹುಲಕೊಪ್ಪ ಗ್ರಾಮಕ್ಕೆ ಶಾಸಕರು ಹಾಗೂ ಸಚಿವರಾದಂತ ಸಂತೋಷ್ ಲಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರದ ಭರವಸೆ ನೀಡಿದ್ದಾರೆ. ಅರಣ್ಯ ಇಲಾಖೆ ಇದರ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕಾಗಿದ್ದು ಪ್ರಾಣಿಗಳು ಹೊಲಗಳಿಗೆ ಬಾರದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿದೆ.

ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ

Edited By : Suman K
Kshetra Samachara

Kshetra Samachara

03/09/2025 01:22 pm

Cinque Terre

51.51 K

Cinque Terre

1

ಸಂಬಂಧಿತ ಸುದ್ದಿ