ಹುಬ್ಬಳ್ಳಿ: ಹುಬ್ಬಳ್ಳಿ ಜನರೇ ನಿಮ್ಮ ಮನೆ ಹೊರಗಿಟ್ಟ ವಸ್ತಗಳ ಬಗ್ಗೆ ಗಮನ ಇರಲಿ. ಮಳ್ಳರಂತೆ ಬಂದ ಕಳ್ಳರು ಸಿಕ್ಕ ಸಿಕ್ಕ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ. ಇಲ್ಲಿಬ್ಬರು ಕಳ್ಳರು ಸಾಮಾನ್ಯರಂತೆ ಬಂದು ಮನೆ ಹೊರಗೆ ಇಟ್ಟಿದ್ದ ಗ್ಯಾಸ್‌ನ್ನು ಎತ್ತಕೊಂಡು ಹೋಗಿರುವ ಘಟನೆ ಹುಬ್ಬಳ್ಳಿ ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಪೇಟ್‌ದಲ್ಲಿ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೌದು ಹೀಗೆ ಇಬ್ಬರೂ ಕಳ್ಳರು ಅಮಾಯಕರಂತೆ ಬಂದು, ಹಿರೇಪೇಟ್‌ದಲ್ಲಿರುವ ಕಾಲೆಬುಡಗಡಿ ಕಾಂಪ್ಲೆಕ್ಸ್ ಅಂಡರ್‌ಗ್ರೌಂಡ್‌ಗೆ ಹೋಗಿದ್ದಾರೆ. ಆ ಕಾಂಪ್ಲೆಕ್ಸ್ ಕೆಳಗೆ ಇಟ್ಟಿದ್ದ ಗ್ಯಾಸ್‌ನ್ನು ಎತ್ತುಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದಕ್ಕಾಗಿ ಸಾರ್ವಜನಿಕರೇ ಹುಷಾರ್ ಆಗಿರಿ. ನಿಮ್ಮ ಮನೆ ಹತ್ತಿರ ಯಾರಾದ್ರೂ ಅಪರಿಚಿತರು ಬಂದ್ರೆ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/09/2025 04:47 pm