ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜೇಶ್ವರಿ ಹೊಟೇಲ್‌ ಒಳಗ ಅಡಗಿ ತುಂಬ ನೊಣ, ಹುಳುಗಳು - ಗ್ರಾಹಕ ಆಕ್ರೋಶ

ಹುಬ್ಬಳ್ಳಿ: ನೋಡ್ರಪ್ಪೋ ನೋಡ್ರಿ.... ನಮ್ ಹುಬ್ಳಿ ಬಂಕಾಪುರ ಚೌಕ್‌ ದಾಗ ರಾಜೇಶ್ವರಿ ಹೊಟೇಲ್ ಐತಿ... ಈ ಹೊಟೇಲ್‌ ಒಳಗ ಅಡಗಿ ಮಾಡಲ್ಲಿ ಹೋದ್ರ... ಇಡಿ ಬಾಂಡೆ ಸಾಮಾನ ತುಂಬ ಬರೇ ನೊಣ, ಹುಳಾನ ಕಾಣಾಕತ್ತವ ನೋಡ್ರಿ.... ಅದರಾಗು ದೋಸೆ ಹಿಟ್ಟ ತುಂಬ ಬರೆ ಹುಳಾನ... ಅಂಗ ಮಿಕ್ಸಿ ಒಳಗ ಹಾಕಿ ರುಬ್ಬಾಕತ್ತಾರಾ... ಯವ್ವಾ ಯವ್ವಾ ನಾನ ನೋಡಾಕಾ ಒಲ್ಲೆ... ಹೆಂಗ್ ಕರಬಾ ಇಟ್ಟಾರ ನೀವ ಒಂದ ಸಾರಿ ನೋಡ್ರಿ....

ನಮ್ ಜನಾ ಮನ್ಯಾಗ ತಿಂದ ಬೇಜಾರ ಆಗೋದಕ್,, ಬಾಯಿ ಚಪ್ಪಲ ತಿರಸ್ಕೋದಕ್ ಅಂತ ಹೊಟೇಲ್‌ಗ ಹೋದ್ರ... ಆದ್ರ ಈ ಬಂಕಾಪುರ ಚೌಕ್‌ದಾಗ ಇರೋ ರಾಜೇಶ್ವರಿ ಹೊಟೇಲ್ ವ್ಯವಸ್ಥೆ ನೋಡಿದ್ರ ಯಾರಿಗೂ ತಿನ್ನಾಕ ಮನಸ್ಸ್ ಬರಲ್ಲಾ ನೋಡ್ರಿ... ಹೊರಗ ಹೊಳಪ ಒಳಗೆಲ್ಲಾ ಹುಳುಕು ಆಗೈತಿ ನೋಡ್ರಿ..

ಇದು ದೋಸೆ ಹಿಟ್ಟು, ಹೆಂಗ್ ನೊಣ ಕುಂತಾವ ನೋಡ್ರಿ... ಅದು ಹೋಗ್ಲಿ ಇಲ್ಲೆ ನೋಡ್ರಿ... ಬಾಂಡೆ ಸಾಮಾನ ಕಾಣದಂಗ ಹೆಂಗ್ ನೊರ್ಜ್ ಕುಂತಾವ್ ಅಂತ್....

ಈ ಹೊಟೇಲ್ ಒಳಗಿನ ಕಿಚನ್‌ಗ ಹೋಗಿ ಬಿಟ್ರ ಸಾಕು... ಎಲ್ಲೆಂದರಲ್ಲಿ ಕಸಾ, ಏನ ಬೇಕಾದ್ರೂ ಕೂಡದ ಅಲ್ಲೆ ಒಗದಾರ... ಅಡಗಿ ಮಾಡಲ್ಲೇ ಹಿಂಗ್ ಕರಾಬ್ ಇಟ್ಟಾರ ನೋಡ್ರಿ... ಹೊಟೇಲ್ ಅಂದ್ರ ಹೆಂಗ ಇರಬೇಕ ಹೊರಗೂ ಹೆಂಗ್ ಚುಲ ಇಡ್ತೆವಿ ಒಳಗೂ ಹಂಗೆ ಚೊಕ್ಕ ಇಡಬೇಕು...

ನಾಸ್ಟಾದಾಗ ಹುಳ ಬಂದಿದ್ದಕ್ ಗ್ರಾಹಕನೊಬ್ಬ ಒಳಗೆ ಹೋಗಿ ನೋಡಿದ್ರ ಇಂತಾ ಸ್ಥಿತಿ ಇತ್ತಂತ ನೋಡ್ರಿ... ಕೂಡಲೆ ಅವರು ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್‌ಗೆ ಕಳಿಸಿದ್ದಾರೆ. ಈ ಬಗ್ಗೆ ಆರೋಗ್ಯ ಅಧಿಕಾರಿಗಳು ಹೋಟೇಲ್‌ನತ್ತ ಗಮನಿಸಿ ಸ್ವಚ್ಚತೆ ಇಡುವುದರ ಬಗ್ಗೆ ಅರಿವು ಮೂಡಿಸಬೇಕಿದೆ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/09/2025 04:08 pm

Cinque Terre

33.53 K

Cinque Terre

8

ಸಂಬಂಧಿತ ಸುದ್ದಿ