ಗದಗ: ಮಳೆಗಾಲದಲ್ಲಿ ಪ್ರಕೃತಿಯನ್ನು ನೋಡುವುದೇ ಒಂದು ರೀತಿಯ ಆನಂದ ಅದರಲ್ಲೂ ಗೀಜಗ ಪಕ್ಷಿಯು ಕಟ್ಟಿರುವ ಗೂಡುಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ನೀವು ಗೀಜಗ ಪಕ್ಷಿಗಳು ಕಟ್ಟುತ್ತಿರುವ ಗೂಡುಗಳನ್ನು ನೋಡಿಲ್ವ ಹಾಗಾದರೆ ಮತ್ತೆ ಏಕೆ ತಡ ನಾವು ತೋರಿಸುತ್ತೇವೆ ನೋಡಿ.
ಗೀಜಗ ಪಕ್ಷಿ ಅತ್ಯಂತ ಬುದ್ದಿವಂತ ಪಕ್ಷಿ. ಗುಬ್ಬಚ್ಚಿ ಜಾತಿಗೆ ಸೇರುವ ಪಕ್ಷಿಯಾದರೂ ಗೀಜಗದ ಹಕ್ಕಿ ಪ್ರಾಕೃತಿಕ ವಾಸ್ತುಶಿಲ್ಪಿ ಅದರ ಕೌಶಲ್ಯವನ್ನು ಮನುಷ್ಯರೂ ಕಲಿತುಕೊಳ್ಳಬೇಕು. ಇದೀಗ ಗೀಜಗ ಕಟ್ಟಿರುವ ಗೂಡುಗಳು ಗದಗ ಜಿಲ್ಲಾದ್ಯಾಂತ ಕೆರೆ ಬಾವಿ ಹಾಗೂ ನೀರಿನ ಸೆಲೆಯ ಮೇಲೆರುವ ಗಿಡಗಳಲ್ಲಿ ಕಾಣಬಹುದಾಗಿದೆ.
ಕೇವಲ ಹಸಿ ಮತ್ತು ಒಣ ಹುಲ್ಲುಗಳಿಂದ ಶಂಖುವಿನಾಕೃತಿಯಲ್ಲಿ ತನ್ನ ಕೊಕ್ಕು ಮತ್ತು ಕಾಲುಗಳನ್ನೇ ಬಳಸಿಕೊಂಡು ಒತ್ತಾಗಿ ಒಳಗಿರುವುದು ಪಕ್ಷಿ ಮಳೆಯಲ್ಲಿ ನೆನೆಯದ ರೀತಿಯಲ್ಲಿ ನೇಯ್ಗೆ ಮಾಡುವುದನ್ನು ನೋಡಲು ಸೊಗಸು. ಮೊದಲು ಗೂಡುಕಟ್ಟಲು ಪ್ರಶಸ್ತವಾದ ಸ್ಥಳವನ್ನು ಹುಡುಕಿಕೊಂಡು ಆ ಕೊಂಬೆಯ ತುತ್ತ ತುದಿಯಲ್ಲಿ ಮೊದಲು ನೇತು ಹಾಕಿಕೊಳ್ಳುವಂತೆ ಹೆಣೆಯುತ್ತಾ ಕ್ರಮೇಣ ಮಧ್ಯಭಾಗದಲ್ಲಿ ಅಗಲವಾದ ಪಾತ್ರೆಯಂತೆ ಅಗಲಗೊಳಿಸಿ ಮತ್ತೆ ಕೆಳಭಾಗಕ್ಕೆ ಕೊಳವೆಯಂತೆ ವಿನ್ಯಾಸಗೊಳಿಸುತ್ತದೆ.
ಸುರೇಶ ಎಸ್. ಲಮಾಣಿ ಪಬ್ಲಿಕ್ ನೆಕ್ಸ್ಟ್ ಗದಗ
Kshetra Samachara
03/09/2025 02:37 pm