ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕುಟುಂಬ ಸೇರಿಕೊಂಡ ಒಡಿಸ್ಸಾದ ಮಾನಸಿಕ ಅಸ್ವಸ್ಥ ಯುವಕ

ಉಡುಪಿ: ಕಳೆದ ಎಂಟು ದಿನಗಳ ಹಿಂದೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರಿಂದ ರಕ್ಷಿಸಲ್ಪಟ್ಟ ಒಡಿಸ್ಸಾ ಮೂಲದ ಯುವಕ ಕೊನೆಗೂ ಕುಟುಂಬ ಸೇರಿಕೊಂಡಿದ್ದಾನೆ. ಮನೋರೋಗಿ ಯುವಕನಿಗೆ ಕೆಲವು ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದು ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ಯುವಕ ಸಾಗರ (24) ಒಡಿಸ್ಸಾ ಮೂಲದವನಾಗಿದ್ದು ಆಕಸ್ಮಿಕ ಮನೋರೋಗಿಯಾಗಿ ಉಡುಪಿಗೆ ಬಂದಿದ್ದ. ನಗರದ ನಿಟ್ಟೂರಿನ ಮನೆಗಳಿಗೆ ಪ್ರವೇಶಿಸಿ ಭಯದ ವಾತಾವರಣ ಸೃಷ್ಟಿಸಿದ್ದ. ಸ್ಥಳೀಯ ನಗರಸಭಾ ಸದಸ್ಯೆ ಸಂಪಾ ವಿನಂತಿ ಮೇರೆಗೆ ವಿಶು ಶೆಟ್ಟಿಯವರು ಈತನನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಮಾಹಿತಿ ಪಡೆದ ಸಹೋದರ ಹಾಗೂ ಸಂಬಂಧಿಕರು ಉಡುಪಿಗೆ ಬಂದಿದ್ದು ತಮ್ಮ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.

Edited By : PublicNext Desk
Kshetra Samachara

Kshetra Samachara

03/09/2025 04:11 pm

Cinque Terre

1.23 K

Cinque Terre

0

ಸಂಬಂಧಿತ ಸುದ್ದಿ