ಸುರತ್ಕಲ್ : ಕುಳಾಯಿ-ಕಾನ ಪೆಟ್ರೋಲ್ ಪಂಪ್ ಬಳಿ ಬಿದ್ದು ಸಿಕ್ಕಿದ್ದ ಸುಮಾರು 3.52 ಲಕ್ಷ ರೂ. ಮೌಲ್ಯದ 36 ಗ್ರಾಂ ತೂಕದ ಚಿನ್ನದ ಸರವನ್ನು ಗಸ್ತು ನಿರತ ಪೊಲೀಸ್ ಸಿಬ್ಬಂದಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
ಕುಳಾಯಿ ನಿವಾಸಿ ನಿಖಿಲ್ ಎಂಬವರು ಸಮಾರಂಭವೊಂದಕ್ಕೆ ಹೋಗಿ ಬರುತ್ತಿದ್ದ ವೇಳೆ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಈ ಕುರಿತು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅದೇ ವೇಳೆ ಗಸ್ತಿನಲ್ಲಿ ಇದ್ದ ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಕಿರಣ್ ಕುಮಾರ್ ಹಾಗೂ ಚಾಲಕ ಮಂಜುನಾಥ ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದಾಗ ಚಿನ್ನದ ಸರವನ್ನು ಪತ್ತೆಹಚ್ಚಿದರು. ಬಳಿಕ ಅದನ್ನು ಸುರತ್ಕಲ್ ಪೊಲೀಸ್ ನಿರೀಕ್ಷಕರಿಗೆ ಒಪ್ಪಿಸಿದರು.
ಚಿನ್ನ ಪತ್ತೆಯಾದ ಮರುದಿನ ಸೆಪ್ಟೆಂಬರ್ 4ರಂದು ಚಿನ್ನದ ವಾರಸುದಾರ ನಿಖಿಲ್ ಅವರನ್ನು ಠಾಣೆಗೆ ಕರೆಸಿ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಚಿನ್ನದ ಸರವನ್ನು ಅವರ ಕೈಗೆ ಹಸ್ತಾಂತರಿಸಿದರು.
Kshetra Samachara
08/09/2025 03:25 pm