ಉಡುಪಿಯ ಪರ್ಕಳದಲ್ಲಿರುವ ಅಜ್ಜ ಅಜ್ಜಿ ಹೋಟೆಲ್ ಸಿಕ್ಕಾಪಟ್ಟೆ ಫೇಮಸ್.1951 ರಲ್ಲಿ ಆರಂಭವಾದ ಈ ಹೋಟೆಲ್ ಇಂದಿಗೂ ಅದೇ ಪ್ರೀತಿ ಹಾಗೂ ರುಚಿಯಾದ ಫುಡ್ ನೊಂದಿಗೆ ಜನರ ಹೊಟ್ಟೆ ತುಂಬಿಸ್ತಾ ಇದೆ.
ಇವರೇ ನೋಡಿ ಈ ಹೋಟೆಲ್ ಮಾಲಕ್ರಾದ ಅಜ್ಜ ಗೋಪಾಲಕೃಷ್ಣ ಪ್ರಭು..ತನ್ನ ಮಡದಿಯೊಂದಿಗೆ ಈ ಹೋಟೆಲ್ ನಡೆಸ್ತಾರೆ. ದಿನಾ ಬೆಳಗ್ಗೆ ಎದ್ದು ಅಜ್ಜ ಅಜ್ಜಿ ಸೇರಿಕೊಂಡು ಅಡುಗೆ ಮಾಡ್ತಾರೆ.ದಿನಕ್ಕೆ ೧೨೦ ರಿಂದ ೧೫೦ ಮಂದಿ ಇಲ್ಲಿ ಊಟ ಮಾಡ್ತಾರೆ.
ತಂದೆ ಆರಂಭಿಸಿದ ಈ ಹೋಟೆಲ್ ಅನ್ನು ೬೫ ವರ್ಷಗಳಿಂದ ಮುನ್ನಡೆಸಿ ಕೊಂಡು ಬರುತ್ತಿದ್ದಾರೆ ಅಜ್ಜ.ಯಾವುದೇ ಜಾಹೀರಾತು ಇಲ್ಲದೆ ಇಲ್ಲಿ ಸಿಗೋ ರುಚಿಯಾದ ಅಡುಗೆನೇ ಜನರನ್ನು ಇತ್ತ ಕಡೆ ಬರುವಂತೆ ಮಾಡಿದೆ.ಈ ಹೋಟೆಲ್ ಬಗ್ಗೆ ಅಜ್ಜ ಹೇಳೋದು ಹೀಗೆ.
ನೀವು ಕೂಡ ಇಲ್ಲಿ ಬಂದು ಊಟ ಸವಿಯಬಹುದು...ಒಂದು ಊಟಕ್ಕೆ just ೬೦ rs ಅಷ್ಟೇ.
PublicNext
04/09/2025 01:14 pm