", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/222042-1756956253-WhatsApp-Image-2025-02-14-at-7.16.19-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೇಷ ರಾಶಿ: ಇಂದು ಪ್ರಯಾಣ ಮಾಡಲು ಶುಭದಿನ. ಧ್ಯಾನ-ಯೋಗ,ವ್ಯಾಯಾಮ ಇತ್ಯಾದಿಗಳಿಗೆ ಹೆಚ್ಚಿನ ಸಮಯವನ್ನು ನೀಡಿ. ಸ್ನೇಹಿತರು-ಬಂಧುಗಳು ನಿಮಗೆ ಪ್ರೀ...Read more" } ", "keywords": "April 9 2025 holidays, National Unicorn Day, International Day of Pink, National Public Health Week, National Biomechanics Day, National Winston Churchill Day, International ASMR Day, National Former Prisoner of War Recognition Day, National Mature Women's Day, Education and Sharing Day, Stress Awareness Month, Animal Cruelty Prevention Month, ", "url": "https://dashboard.publicnext.com/node" } ದಿನ ಭವಿಷ್ಯ: 04-09-2025
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 04-09-2025

ಮೇಷ ರಾಶಿ: ಇಂದು ಪ್ರಯಾಣ ಮಾಡಲು ಶುಭದಿನ. ಧ್ಯಾನ-ಯೋಗ,ವ್ಯಾಯಾಮ ಇತ್ಯಾದಿಗಳಿಗೆ ಹೆಚ್ಚಿನ ಸಮಯವನ್ನು ನೀಡಿ. ಸ್ನೇಹಿತರು-ಬಂಧುಗಳು ನಿಮಗೆ ಪ್ರೀತಿ-ವಿಶ್ವಾಸವನ್ನು ತೋರಿಸುತ್ತಾರೆ. ಇಂದು ಎಲ್ಲಾ ದೃಷ್ಟಿಯಿಂದ ನಿಮಗೆ ಶುಭದಿನ.

ವೃಷಭ: ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡರೆ ವೈದ್ಯರ ಸಲಹೆ ಪಡೆಯಿರಿ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು ಎಚ್ಚರಿಕೆ. ನಿಮ್ಮ ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸಿ. ಈ ದಿನ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು.

ಮಿಥುನ: ಜನರಿಗೆ, ಸಮಾಜಕ್ಕೆ ಒಳ್ಳೆಯದು ಮಾಡಲು ಸದಾವಕಾಶ. ಜನರು ನಿಮ್ಮ ಕಡೆ ಆಕರ್ಷಣೆಗೆ ಒಳಗಾಗುತ್ತಾರೆ. ಅನಾವಶ್ಯಕವಾಗಿ ದುಂದುವೆಚ್ಚ ಮಾಡಬೇಡಿ. ಹಣಕ್ಕಿಂತ ಹೆಚ್ಚಾಗಿ ನಿಮ್ಮ ಕಾರ್ಯವೈಖರಿಯನ್ನು ಜನಮೆಚ್ಚಿ ಅಭಿನಂದಿಸುತ್ತಾರೆ.

ಕಟಕ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ. ಕಾರ್ಯಕ್ಷೇತ್ರದಲ್ಲಿ ಹಿರಿಯ ಆಧಿಕಾರಿಗಳ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮಗಿರುವ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿ ಅದಕ್ಕೆ ಗೌರವ ಲಭಿಸುತ್ತೆ.

ಸಿಂಹ: ಅವಕಾಶವನ್ನು ಮುಂದಿಟ್ಟುಕೊಂಡು ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ. ಪದವೀಧರ ವಿದ್ಯಾರ್ಥಿಗಳಿಗೆ ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆ. ನಿಮ್ಮದೆ ಸ್ಥಳದಲ್ಲಿ ಹಾಗೂ ವಿದೇಶದಲ್ಲಿ ಕೆಲಸಕ್ಕೆ ಹೋಗುವ ಅವಕಾಶಗಳಿವೆ.

ಕನ್ಯಾ: ಅದೃಷ್ಟ ಲಕ್ಷ್ಮಿ ನಿಮ್ಮ ಮನೆಯ ಬಾಗಿಲಿಗೆ ಬಂದ ಅನುಭವವಾಗುತ್ತದೆ. ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಇದೊಂದು ಸದಾವಕಾಶ. ಯಾವುದನ್ನು ದುರುಪಯೋಗ ಮಾಡಿಕೊಳ್ಳದೆ ಕಾರ್ಯತತ್ಪರರಾಗಿ ಶುಭವಿದೆ.

ತುಲಾ: ವಾದ-ವಿವಾದಗಳಿಗೆ ಅಥವಾ ಜಗಳಕ್ಕೆ ಪರಿಹಾರವಲ್ಲ. ಶಾಂತವಾಗಿ ನಿಮ್ಮ ಮನಸ್ಸು ಒಳ್ಳೆಯ ಮಾರ್ಗದತ್ತ ಮುಂದುವರೆಯಲಿ. ಪ್ರೀತಿಸಿ ಮದುವೆಯಾದ ದಂಪತಿಗಳು ಒಂದೇ ನಕ್ಷತ್ರ ಆಗಿದ್ರೆ ಜಗಳ ಮಾಡಿಕೊಳ್ಳುವ ಸಾಧ್ಯತೆ.

ವೃಶ್ಚಿಕ: ನಿಮ್ಮ ಕೆಲಸಕ್ಕೆ ಭರವಸೆ ನೀಡುವ ಕೆಲಸಗಳು ನಡೆಯುತ್ತದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಅಡಚಣೆಯಾಗಬಹುದು

ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವ್ಯಾವಹಾರಿಕವಾಗಿ,ಉದ್ಯೋಗಿಕವಾಗಿ ಸ್ವಲ್ಪ ನಷ್ಟವನ್ನು ಅನುಭವಿಸುವ ದಿನ.

ಧನುಸ್ಸು: ಈ ದಿನ ಸ್ಥಿರಾಸ್ತಿಯನ್ನು ನೋಂದಣಿ ಮಾಡಿಸುವವರು ಮಧ್ಯಾಹ್ನದ ನಂತರ ಮಾಡಿಸಿ . ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ಧಿಯನ್ನು ಹೆಚ್ಚಿಸಲಿದೆ. ತುಂಬಾ ಅಗತ್ಯವಿರುವ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚೆಮಾಡಿ.

ಮಕರ: ಭೂ ವ್ಯವಹಾರ ಮಾಡುವವರಿಗೆ ಸಾಯಂಕಾಲ ಶುಭವಾಗಲಿದೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳ ಮಾಡಿಕೊಳ್ಳಬೇಡಿ. ಹೊಸ ವ್ಯಾಪಾರ ಪ್ರಾರಂಭಿಸುವ ಮುಂಚೆ ಯೋಚಿಸಿ ನಿರ್ಧಾರ ಮಾಡಿ.

ಕುಂಭ: ನಿಧಾನವಾಗಿ ಯೋಚನೆ ಮಾಡಿ ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಅಕ್ಕ ಪಕ್ಕದವರ ಜೊತೆ ಜಗಳ ಮಾಡಬೇಡಿ. ಮಾನಸಿಕ ಸಮಾಧಾನ ಮುಖ್ಯವಾಗಿರುತ್ತದೆ. ಈ ರಾಶಿಯ ನೌಕರರಿಗೆ ಕಿರಿ ಕಿರಿ ಉಂಟಾಗುವ ದಿನ.

ಮೀನ: ಈ ದಿನ ಖರೀದಿಗೆ ಹೆಚ್ಚು ಅವಕಾಶಗಳಿವೆ. ಆಹಾರದ ವೃತ್ಯಯದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳು ಕಾಣಬಹುದು ಜಾಗ್ರತೆ. ಇದು ನಿಮ್ಮ ಮನಸ್ಥೈರ್ಯವನ್ನು ಹೆಚ್ಚಿಸುವಂತದ್ದು. ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರಿಕೆ.

Edited By : Vijay Kumar
PublicNext

PublicNext

04/09/2025 08:54 am

Cinque Terre

10.68 K

Cinque Terre

0