", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/222042-1757039341-WhatsApp-Image-2025-02-14-at-7.16.19-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೇಷ ರಾಶಿ: ಮಕ್ಕಳ ವಿದ್ಯಾಭ್ಯಾಸ, ಪ್ರಗತಿ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ದಿನ. ಈ ದಿನ ನಿಮ್ಮ ಗುರಿಯನ್ನು ತಲುಪುತ್ತೇನೆಂಬ ಆತ್ಮವಿಶ್ವಾಸವನ್ನ...Read more" } ", "keywords": "fake trading apps, online trading scams, investment fraud, stock market scams, cryptocurrency scams, financial security tips, cybercrime prevention, SEBI registered brokers, trading app safety, investment protection, financial loss prevention, Zerodha, fake trading app warnings, online investment risks, trading platform legitimacy, financial scam awareness, India stock market scams,", "url": "https://dashboard.publicnext.com/node" }
ಮೇಷ ರಾಶಿ: ಮಕ್ಕಳ ವಿದ್ಯಾಭ್ಯಾಸ, ಪ್ರಗತಿ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ದಿನ. ಈ ದಿನ ನಿಮ್ಮ ಗುರಿಯನ್ನು ತಲುಪುತ್ತೇನೆಂಬ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಿ. ಈ ದಿವಸ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಟ್ಟರೆ ಒಳ್ಳೆಯದು.
ವೃಷಭ: ತಂದೆಯವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು. ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದವರು ಮುಂದುವರೆಸಿದರೆ ಒಳ್ಳೆಯದು. ನೀವು ಬೇರೆಯವರಿಗೆ ಕೊಟ್ಟ ಹಣ ವಾಪಸ್ಸು ಬರುವುದಿಲ್ಲ.
ಮಿಥುನ: ರಾಜಕೀಯ ವ್ಯಕ್ತಿಗಳಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಶುಭದಿನವಾಗಿದೆ. ಇಂದು ಯಂತ್ರಗಳನ್ನು, ವಾಹನಗಳನ್ನು ಖರೀದಿಸುವ ಯೋಗವಿದೆ.
ಕಟಕ: ಹೊಸ ಖರೀದಿಗೆ ತೀರ್ಮಾನ ಮಾಡುವ ದಿನವಾಗಿದೆ. ಮಧ್ಯವರ್ತಿಗಳಿಗೆ ಬೇಡಿಕೆ ಹೆಚ್ಚಾಗಿ ಲಾಭವೂ ಉಂಟಾಗುತ್ತದೆ. ಸಾಧನೆ ಮಾಡುತ್ತೇನೆಂಬ ಹುಮ್ಮಸ್ಸು ನಿಮಗೆ ಹಿನ್ನಡೆಯಾಗಬಹುದು ಎಚ್ಚರಿಕೆವಹಿಸಿ.
ಸಿಂಹ: ಅಪರಿಚಿತ ವ್ಯಕ್ತಿಗಳ ಮೇಲೆ ಹೆಚ್ಚು ಗಮನವಿರಲಿ. ರಹಸ್ಯ ಯೋಜನೆಗಳು ನಿಮ್ಮ ಮನಸ್ಸಿಗೆ ಬರಬಹುದು. ಚಿತ್ರೋದ್ಯಮ, ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿನ ಉತ್ತಮವಾಗಿದೆ.
ಕನ್ಯಾ: ಮಹಿಳಾ ಉದ್ಯಮಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಕುಟುಂಬದಲ್ಲಿ, ಕಾರ್ಯಕ್ಷೇತ್ರದಲ್ಲಿ ಬೇಸರ ಉಂಟಾಗುವ ದಿನ. ಆವೇಶ, ಉದ್ವೇಗಗಳ ವರ್ತನೆ ಬೇಡ, ತಾಳ್ಮೆ ಇರಲಿ. ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆ ಉಂಟಾಗಿ ಶತ್ರುಕಾಟ ಹೆಚ್ಚಾಗುವ ಸಾಧ್ಯತೆ
ತುಲಾ: ನಿಮ್ಮ ಶಿಸ್ತು ಬೇರೆಯವರನ್ನ ಪ್ರಭಾವಿತರನ್ನಾಗಿ ಮಾಡುತ್ತದೆ. ಮಕ್ಕಳ ವಿಚಾರದಲ್ಲಿ ಗಮನವಿರಲಿ. ಆಂತರಿಕವಾಗಿ ಸಣ್ಣ-ಪುಟ್ಟ ಸಮಸ್ಯೆಗಳು ಉಂಟಾಗಬಹುದು. ಕೆಲಸದ ಹೊರೆ ಜಾಸ್ತಿಯಾಗುವ ಸಾಧ್ಯತೆ ಇದೆ.
ವೃಶ್ಚಿಕ: ಅಕ್ಕಪಕ್ಕದವರಿಂದ ಮಾನಸಿಕ ಕಿರಿಕಿರಿ ಉಂಟಾಗುವ ದಿನ. ಇಂದು ನಿಮ್ಮ ಮನಸ್ಸು ಭಯದಿಂದ ಕೂಡಿರುವ ದಿನವಾಗಿರುತ್ತದೆ. ಇದರಿಂದ ಕುಟುಂಬದವರು ಆತಂಕಕ್ಕೆ ಈಡಾಗುತ್ತಾರೆ. ಉಡುಪು ವಿನ್ಯಾಸ ಮಾಡುವವರಿಗೆ ಶುಭದಿನ.
ಧನುಸ್ಸು: ವೃತ್ತಿಯಲ್ಲಿ ಪ್ರಗತಿ ಕಾಣುವ ದಿನವಾದರೂ ವಿಘ್ನಭೀತಿ ಕಾಡುವ ಸಾಧ್ಯತೆ. ಮನೆಯಲ್ಲಿರುವ ಸ್ತ್ರೀಯರಿಗೆ ಅಶುಭದ ದಿನ. ಹೊಸ ಬದುಕನ್ನು ಆರಂಭಿಸಲು ಶುಭದಿನ. ದಾಂಪತ್ಯದಲ್ಲಿ, ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯಬೇಡ
ಮಕರ: ಮಕ್ಕಳಿಗೆ ಒತ್ತಡ ಹಾಕದೆ ಮಾರ್ಗದರ್ಶನ ಮಾಡಿ. ಬಾಡಿಗೆ ಹಣ ಸಿಕ್ಕುವುದರಿಂದ ಆರ್ಥಿಕ ಅಭಿವೃಧ್ಧಿಯಿದೆ. ಪರ್ವತಾರೋಹಿಗಳಿಗೆ ಯಶಸ್ಸು ಸಿಗುವ ಶುಭದಿನ. ನೆರೆಹೊರೆಯವರಿಂದ, ಸಹೋದ್ಯೋಗಿಗಳಿಂದ ಉತ್ತಮ ಭರವಸೆ ದೊರೆಯುವ ದಿನ.
ಕುಂಭ: ಆರ್ಥಿಕ ಅನುಕೂಲ, ಮಿತ್ರರ ಸಹಕಾರ ನಿಮಗೆ ದೊರೆಯಲಿದೆ. ಒತ್ತಡದಿಂದ ಮನಸ್ಸಿಗೆ ಸಮಾಧಾನವಿರುವುದಿಲ್ಲ. ಆಹಾರ ಮತ್ತು ನಿದ್ರೆಯ ಬಗ್ಗೆ ಹೆಚ್ಚು ಗಮನಹರಿಸಿ. ಹೂಡಿಕೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಮೀನ: ಆಧ್ಯಾತ್ಮಿಕ ಚಿಂತನೆ, ತತ್ವದ ಬಗ್ಗೆ ಹೆಚ್ಚು ಗಮನ ಕೊಡುವ ಅವಕಾಶಗಳಿವೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಶುಭದಿನ. ಕುಟುಂಬದ ಸದಸ್ಯರ ಜೊತೆ ಸಮಯವನ್ನು ಕಳೆಯಿರಿ. ದೂರದ ಪ್ರಯಾಣದ ಚಿಂತನೆಯ ದಿನವಾಗಿದೆ.
PublicNext
05/09/2025 07:59 am