", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/222042-1757215661-WhatsApp-Image-2025-02-14-at-7.16.19-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೇಷ: ಗ್ರಹಣದ ಕುರಿತು ಚಿಂತಿಸದೆ ವಿರಾಮವನ್ನು ಅನುಭವಿಸಿ. ಗೃಹದ ಆವಶ್ಯಕತೆಗಳ ಕಡೆಗೆ ಗಮನ. ದೇವಾಲಯಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ...Read more" } ", "keywords": "daily horoscope September 7 2025, din bhavishya today, daily rashifal in English, horoscope forecast September 7, astrological predictions for September 7, daily astrology, rashifal in Kannada, daily horoscope predictions, financial astrology forecast, Aries horoscope September 7, ", "url": "https://dashboard.publicnext.com/node" } ದಿನ ಭವಿಷ್ಯ: 07-09-2025
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 07-09-2025

ಮೇಷ: ಗ್ರಹಣದ ಕುರಿತು ಚಿಂತಿಸದೆ ವಿರಾಮವನ್ನು ಅನುಭವಿಸಿ. ಗೃಹದ ಆವಶ್ಯಕತೆಗಳ ಕಡೆಗೆ ಗಮನ. ದೇವಾಲಯಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ದಿನ. ಕೆಲವು ವರ್ಗದ ವ್ಯಾಪಾರಿಗಳಿಗೆ ಅನುಕೂಲ.

ವೃಷಭ: ವಿರಾಮ ಆಚರಣೆಯ ನಡುವೆ ಹೊಸ ಯೋಜನೆಗಳ ಚಿಂತನೆ. ದೂರದಲ್ಲಿರುವ ಮಕ್ಕಳ ಆಗಮನ.ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ. ಹಿರಿಯರು, ಗೃಹಿಣಿಯರಿಗೆ ನೆಮ್ಮದಿಯ ಅನುಭವ.

ಮಿಥುನ: ಮನೆಯಲ್ಲಿ ವಿರಾಮದ ಭಾವ. ಉದ್ಯೋಗಸ್ಥರಿಗೆ ನಾಳೆಗೆ ಉಳಿದಿರುವ ಕೆಲಸಗಳ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ. ಧಾರ್ಮಿಕ ಸಾಹಿತ್ಯ, ಸತ್ಸಂಗಕ್ಕೆ ಸಮಯ ನೀಡಿಕೆ.

ಕರ್ಕಾಟಕ: ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಭೇಟಿ. ಉದ್ಯೋಗಾಸಕ್ತ ಉದ್ಯೋಗಸ್ಥರಿಂದ ಸಂಸಾರದ. ಆವಶ್ಯಕತೆಗಳತ್ತ ಗಮನ. ಮಕ್ಕಳಿಗೆ ವ್ಯಾಸಂಗದಲ್ಲಿ ಸೂಕ್ತ ಮಾರ್ಗದರ್ಶನದ ಏರ್ಪಾಡು. ವ್ಯವಹಾರ ಸಂಬಂಧ ಪಾಲುದಾರರೊಂದಿಗೆ ಮಾತುಕತೆ.

ಸಿಂಹ: ನೂತನ ಗೃಹ ನಿರ್ಮಾಣದ ಪ್ರಗತಿ ವೀಕ್ಷಣೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ವೈದ್ಯರು, ಎಂಜಿನಿಯರ್‌ರು ಮೊದಲಾದ ವೃತ್ತಿಪರರಿಗೆ ಕೆಲಸದ ಒತ್ತಡ. ಗೃಹಿಣಿಯರ ಆದಾಯ ಹೆಚ್ಚಳ.

ಕನ್ಯಾ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ. ಆಯ್ದ ವರ್ಗಗಳ ವ್ಯಾಪಾರಿಗಳಿಗೆ ಉತ್ತಮ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ. ಧಾರ್ಮಿಕ ನಾಯಕರೊಬ್ಬರ ಭೇಟಿಯ ಸಾಧ್ಯತೆ. ಗೃಹಿಣಿ, ಮತ್ತು ಮಕ್ಕಳಿಗೆ ಸಂಭ್ರಮದ ದಿನ.

ತುಲಾ: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ.

ವೃಶ್ಚಿಕ: ಆವಶ್ಯಕ ಸೌಕರ್ಯಗಳಿಗೆ ಕೊರತೆಯಾಗದು. ಮಹಿಳೆಯರಿಂದ ವಸ್ತ್ರಾಭರಣ ಖರೀದಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಮಹಿಳೆಯರ, ಹಿರಿಯರ ಆರೋಗ್ಯ ಉತ್ತಮ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಾಂತ್ವನ.

ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಪ್ರವಾಸ ಕಾರ್ಯಕ್ರಮ ಮುಂದೂಡಿಕೆ. ಗೃಹಾಲಂಕಾರ, ತೋಟಗಾರಿಕೆಗೆ ಸಮಯ ನೀಡಿಕೆ. ಆಪ್ತಮಿತ್ರರ ಮನೆಗೆ ಸಂಸಾರ ಸಹಿತ ಭೇಟಿ.

ಮಕರ: ಪಟ್ಟುಹಿಡಿದು ಕಾರ್ಯ ಸಾಧಿಸಿದ ತೃಪ್ತಿ. ಬಾಲ್ಯದ ಒಡನಾಡಿಯ ಆಗಮನ. ಉತ್ತರ ದಿಕ್ಕಿನಲ್ಲಿ ಸಣ್ಣ ಪ್ರಯಾಣದ ಸಾಧ್ಯತೆ. ಗೃಹಿಣಿಯರಿಗೆ ಅತಿಥಿ ಸತ್ಕಾರ ಯೋಗ. ವಸ್ತ್ರ, ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಸಾಮಾನ್ಯ ಲಾಭ.

ಕುಂಭ: ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದ ನೇತೃತ್ವ. ಗೃಹಿಣಿಯರಿಗೆ ಸ್ವ ಉದ್ಯೋಗದಲ್ಲಿ ಆಸಕ್ತಿ. ಆಸ್ಪತ್ರೆ, ಅನಾಥಾಲಯ, ವೃದ್ಧಾಶ್ರಮಕ್ಕೆ ಭೇಟಿ. ಒಡನಾಡಿಯ ಮನೆಯಲ್ಲಿ ದೇವತಾ ಕಾರ್ಯ.

ಮೀನ: ಕರ್ಮಕಾರಕನಾದ ಶನಿಯಿಂದ ಸತ್ಕರ್ಮಗಳಿಗೆ ಪ್ರೇರಣೆ. ಸಂಸಾರ ಸಹಿತ ಇಷ್ಟದೇವತಾ ದರ್ಶನ. ಹಿರಿಯರ ಆರೋಗ್ಯ ಉತ್ತಮ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ. ಸಾಮಾಜಿಕ ಸಮಸ್ಯೆ ನಿವಾರಣೆ ಕಾರ್ಯದಲ್ಲಿ ಮಗ್ನತೆ.

Edited By : Vijay Kumar
PublicNext

PublicNext

07/09/2025 08:57 am

Cinque Terre

12.35 K

Cinque Terre

0