ಮೇಷ: ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ ಸಂತೋಷವಾಗುವುದು. ಆಡಳಿತಾತ್ಮಕ ವಿಚಾರದಲ್ಲಿ ಭಾರಿ ಬದಲಾವಣೆಗಳ ಅಗತ್ಯಗಳನ್ನು ಸಂಸ್ಥಾಪಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗುವಿರಿ.
ವೃಷಭ: ಕಾರ್ಯ ಪ್ರಗತಿಯಲ್ಲಿ ಆಗಾಗ ಹೆಚ್ಚಿನ ಜವಾಬ್ದಾರಿ ಎದುರಾಗಿ ಸವಾಲು ಬರಲಿದೆ. ಕಟ್ಟಡ ಗುತ್ತಿಗೆದಾರರಿಗೆ ಬಿಡುವಿಲ್ಲದಂತಾದೀತು. ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ. ಏಕಾಗ್ರತೆಯನ್ನು ಕಾಯ್ದುಕೊಳ್ಳಿ.
ಮಿಥುನ: ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ವ್ಯವಹರಿಸಿ. ಎದುರಾಳಿಗಳನ್ನು ಮಾತಿನಲ್ಲಿ ಸುಲಭವಾಗಿ ಕಟ್ಟಿಹಾಕುವಿರಿ. ಗೃಹದಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಯಶಸ್ಸಿನ ಮಾರ್ಗಗಳು ಗೋಚರಿಸಲಿವೆ.
ಕರ್ಕಾಟಕ: ಆರ್ಥಿಕವಾಗಿ ಮುಂದೆ ಬರುವ ಉದ್ದೇಶವನ್ನು ಇಟ್ಟುಕೊಂಡು ವಾಮಮಾರ್ಗವನ್ನು ಅನುಸರಿಸಬೇಡಿ. ಗುತ್ತಿಗೆ ವ್ಯವಹಾರಗಳಲ್ಲಿ ಎಡವಬಹುದು, ಜಾಗ್ರತರಾಗಿರಿ. ಶನೈಶ್ಚರನ ಆರಾಧನೆ ಮಾಡಿ.
ಸಿಂಹ: ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸನ್ನು ಕಾಣುವರು. ಸ್ನೇಹಿತರ ಬಳಗದಲ್ಲಿ ಅವರವರ ಸ್ವಾರ್ಥಕ್ಕಾಗಿ ವಂಚನೆಯ ಕಡೆಗೆ ಕರೆದೊಯ್ಯುವ ಪ್ರಯತ್ನ ನಡೆಯಲಿದೆ.
ಕನ್ಯಾ: ಪ್ರವಾಸದಿಂದ ಅನಿರೀಕ್ಷಿತವಾದ ಲಾಭದ ಅನುಭವ ಉಂಟಾಗುವುದು. ಅವಿವಾಹಿತರಿಗೆ ವಿವಾಹ ಯೋಗವು ಇದೆ. ಅಪರೂಪದ ಮೃದು ಧೋರಣೆಯಿಂದ ಇತರರಿಗೆ ಸಂತೋಷವೆನಿಸುವುದು.
ತುಲಾ: ವೈದ್ಯರಿಗೆ ಬಿಡುವಿಲ್ಲದ ಅಭ್ಯಾಸದ ಉನ್ನತ ಜವಾಬ್ದಾರಿಯ ಸ್ಥಾನಕ್ಕೆ ವರ್ಗಾವಣೆಯಾಗುವುದು. ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರಲಿದೆ.
ವೃಶ್ಚಿಕ: ಆಫೀಸಿನ ಆಗು ಹೋಗುಗಳ ಬಗ್ಗೆ ಗಮನವಿಟ್ಟುಕೊಳ್ಳಿ. ಅಪರಿಚಿತರ ಹತ್ತಿರ ಗೌಪ್ಯತೆಯನ್ನು ಹಂಚಿಕೊಳ್ಳಬೇಡಿ. ಹೊಸತನದಲ್ಲಿ ಜಯ ಕಾಣುವಿರಿ. ಹಿರಿಯರ ಆರೋಗ್ಯದ ವಿಷಯದಲ್ಲಿ ಮುತುವರ್ಜಿ ವಹಿಸಿ.
ಧನು: ಸತ್ಯ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ರಕ್ತದೊತ್ತಡ ಸ್ಥಿತಿ ಸಮತೋಲನಕ್ಕೆ ಬರುವಂತೆ ಮಾಡಿಕೊಳ್ಳಿ. ಮಗನಿಗೆ ಉದ್ಯೋಗ ದೊರೆಯಲಿದೆ.
ಮಕರ: ಮಾಡಿದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗ ದಿನವಿದೆ. ರಫ್ತು ವ್ಯಾಪಾರ ಮಾಡುವವರಿಗೆ ಸಂಪರ್ಕದಲ್ಲಿ ಅಡೆತಡೆಗಳು ಉಂಟಾಗಲಿವೆ. ಹೊಸ ವಸ್ತ್ರಗಳ ಖರೀದಿಯನ್ನು ಮಾಡುವಿರಿ.
ಕುಂಭ: ಇತ್ತೀಚಿನ ದಿನಗಳಲ್ಲಿ ನೀವು ಮಾಡಿಕೊಂಡ ಹೊಸ ಪರಿಚಯ ಒಂದು ತರಹದಿಂದ ನಿಮಗೆ ಪ್ರಯೋಜನಕ್ಕೆ ಬರಲಿದೆ. ನಿಮ್ಮ ಪ್ರತಿಭೆ ಮತ್ತು ಕೌಶಲಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ.
ಮೀನ: ಯುವಕ ಯುವತಿಯರಿಗೆ ಕಾಲೇಜಿನ ಶಿಸ್ತುಬದ್ಧವಾದ ಜೀವನವು ಉಸಿರುಗಟ್ಟಿಸುವಂತಹ ಅನುಭವವನ್ನು ತರಿಸಬಹುದು. ಯೋಗಿಗಳ ದರ್ಶನ ಹಾಗೂ ಮಾರ್ಗದರ್ಶನದ ಅಗತ್ಯವಿರುತ್ತದೆ.
PublicNext
08/09/2025 07:48 am