ಕಾರವಾರ : ನಗರದ ಬಿಣಗಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುರುವಾರ ಮಧ್ಯಾಹ್ನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಮೇಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಕೇರಳ ನೊಂದಣಿಯ ಕಾರು ಅಂಕೋಲಾ ಕಡೆಯಿಂದ ಕಾರವಾರಕ್ಕೆ ಬರುತ್ತಿತ್ತು. ಈ ವೇಳೆ ಬಿಣಗಾ ಬಳಿ ಕಾರು ಚಾಲಕ ನಿಯಂತ್ರಣಕ್ಕೆ ಸಿಗದೇ ಡಿವೈಡರ್ ಹತ್ತಿದೆ. ಅಲ್ಲದೇ ಡಿವೈಡರ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕಂಬ ಮುರಿದು ಬಿದ್ದಿದ್ದು ಕಾರಿನ ಮುಂಭಾಗ ಕೂಡ ಜಖಂಗೊಂಡಿದೆ. ಕಾರಿನ ಚಾಲಕನಿಗೆ ಸಣ್ಣ ಗಾಯಗಳಾಗಿವೆ. ಸ್ಥಳಕ್ಕೆ ಕಾರವಾರ ಸಂಚಾರ ಠಾಣೆಯ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/09/2025 06:04 pm