", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/39710820250906041939filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "GN Bhat Yallpur" }, "editor": { "@type": "Person", "name": "7899588538" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಯಲ್ಲಾಪುರ: ಬುಲೆರೋ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಆರು ಜನರಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಬಿದ್ರಳ್ಳಿ ಕ್ರಾಸ್ ಸಮೀಪ ಯಲ್ಲ...Read more" } ", "keywords": "Node", "url": "https://dashboard.publicnext.com/node" }
ಯಲ್ಲಾಪುರ: ಬುಲೆರೋ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಆರು ಜನರಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಬಿದ್ರಳ್ಳಿ ಕ್ರಾಸ್ ಸಮೀಪ ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ನಡೆದಿದೆ.
ಬುಲೆರೋ ವಾಹನದ ಚಾಲಕ ಆರೋಪಿ ಖಾನಾಪುರದ ಮಲ್ಲಪ್ಪ ತಂದೆ ಸಿದ್ದಪ್ಪ ಜಿರಳಿ ಎಂಬಾತ ತನ್ನ ಬುಲೆರೋ ವಾಹನವನ್ನು ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಯಲ್ಲಾಪುರ ತಾಲೂಕಿನ ಬಿದ್ರಳ್ಳಿ ರಾಮಲಿಂಗೇಶ್ವರ ದೇವಾಲಯದ ಸಮೀಪ ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಹಳಿಯಾಳ ತಾಲುಕಿನ ಕೆಸರೊಳ್ಳಿಯ ಗುರುನಾಥ ತಂದೆ ಶಾಂತಾರಾಮ ಚೋಪಡಿ ಅವರ ಕಾರಿಗೆ ಡಿಕ್ಕಿಹೊಡೆದಿದೆ.
ಪರಿಣಾಮ, ಕಾರು ಚಾಲನೆ ಮಾಡುತ್ತಿದ್ದ ಗುರುನಾಥ ಚೋಪಡಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಳಿಯಾಳದ ಸಂದೀಪ ಶಿಮನಗೌಡ, ಸೈಯದ್ ಅಲಿ ಉಮರ್ ಸಾಬ್ ಹಳಬ, ಸುನೀಲ್ ಡಿಸೋಜಾ, ಜ್ಞಾನೇಶ್ವರ ಗಂದೇಟಕರ್, ಸಚಿನ್ ಪಾವಲೆ ಇವರಿಗೆ ಗಾಯವಾಗಿದೆ. ಘಟನೆಯಲ್ಲಿ ಎರಡೂ ವಾಹನಗಳೂ ಜಕಂಗೊಂಡಿವೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/09/2025 04:19 pm