", "articleSection": "Crime,Accident,News", "image": { "@type": "ImageObject", "url": "https://prod.cdn.publicnext.com/s3fs-public/421698-1756723825-017~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದಾಂಡೇಲಿ: ಮಾನವ ಸ್ನೇಹಿ ಎಂದೇ ಕರೆಯಿಸಿಕೊಳ್ಳುತ್ತಿದ್ದ ದಾಂಡೇಲಿ ಕಾಳಿ ಹಿನ್ನೀರಿನ ಮೊಸಳೆಗಳು ಈಗ ಮಾನವನ ಜೀವಕ್ಕೆ ಕಂಟಕವಾಗುತ್ತಿವೆ. ಇದಕ್ಕೆ ಸ...Read more" } ", "keywords": "Dandeli,Kali backwaters,crocodiles,human-animal conflict,danger to human life,local news,Karnataka,wildlife,crocodile sightings,public safety", "url": "https://dashboard.publicnext.com/node" }
ದಾಂಡೇಲಿ: ಮಾನವ ಸ್ನೇಹಿ ಎಂದೇ ಕರೆಯಿಸಿಕೊಳ್ಳುತ್ತಿದ್ದ ದಾಂಡೇಲಿ ಕಾಳಿ ಹಿನ್ನೀರಿನ ಮೊಸಳೆಗಳು ಈಗ ಮಾನವನ ಜೀವಕ್ಕೆ ಕಂಟಕವಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಮೊಸಳೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ.
ಹೌದು, ಇಲ್ಲಿನ ಕಾಳಿ ಹಿನ್ನೀರಿನ ಪ್ರದೇಶದಲ್ಲಿ ಇರುವ ಮೊಸಳೆಗಳು ಮಾನವ ಸ್ನೇಹಿಯಾಗಿದ್ದವು. ಮಾನವರಿಗೆ ಹಾನಿ ಮಾಡಿದ ಯಾವುದೇ ಉದಾಹರಣೆ ಇರಲಿಲ್ಲ. ಆದ್ರೆ, ಕಳೆದ ಮೂರು ವರ್ಷದಿಂದ ಈಗ ಇಲ್ಲಿನ ಮೊಸಳೆಗಳು ಜನವಸತಿ ಪ್ರದೇಶಕ್ಕೂ ಲಗ್ಗೆ ಇಡುತ್ತಿವೆ. ಅದರ ಜತೆಗೆ ದನಕರುಗಳನ್ನ ಎಳೆದೊಯ್ದು ತಿನ್ನುತ್ತಿವೆ. ಹಾಗೆ ಗಾಳ ಹಾಕಿ ಮೀನು ಹಿಡಿಯಲು ಹೋದವರ ಮೇಲೂ ದಾಳಿ ಇಟ್ಟು ಎಳೆದೊಯ್ದ ಘಟನೆ ನಡೆದುಹೋಗಿದೆ. ಈ ಹಿನ್ನಲೆಯಲ್ಲಿ ಈಗ ಮೊಸಳೆಗಳ ಆರ್ಭಟ ಜೋರಾಗಿದ್ದು, ಯಾವಾಗಬೇಕಾದ್ರು, ಯಾವ ಕ್ಷಣದಲ್ಲಾದ್ರು ದಾಳಿ ಇಡುವ ಆತಂಕದಲ್ಲೇ ಜನರಿದ್ದಾರೆ.
ವರ್ಷ ಕಳೆದಂತೆ ಮೊಸಳೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆಹಾರಕ್ಕಾಗಿ ಮೊಸಳೆಗಳು ಸ್ಥಳೀಯ ಸಾಕು ಪ್ರಾಣಿಗಳನ್ನ ಭಕ್ಷಿಸುತ್ತಿವೆ. ಇದರ ಜತೆಗೆ ಮಾನವನ ಮೇಲೂ ದಾಳಿ ಇಡುತ್ತಿವೆ. ಒಂದಾನೊಂದು ಕಾಲದಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆದು ಪ್ರವಾಸಿ ತಾಣವಾಗಿದ್ದ ಮೊಸಳೆ ಪಾರ್ಕ್ ಈಗ ಪ್ರವಾಸಿಗರಿಗೆ ಭಯ ಹುಟ್ಟಿಸುವ ಸ್ಥಳವಾಗಿದೆ.
ಈ ಹಿಂದೆ ಎಷ್ಟೇ ಹತ್ತಿರದಲ್ಲಿ ಇದ್ರು ಕೂಡಾ ಮೊಸಳೆಗಳು ಮಾನವನಿಗೆ ಹಾನಿ ಮಾಡಿದ ಉದಾಹರಣೆ ಇರಲಿಲ್ಲ. ಆದ್ರೆ, ಈಗ ಮೊಸಳೆಯನ್ನು ದೂರದಿಂದ ನೋಡಲು ಕೂಡಾ ಪ್ರವಾಸಿಗರು ಆಗಮಿಸುವುದಿಲ್ಲ. ಯಾಕೆಂದ್ರೆ, ಇಲ್ಲಿನ ಮೊಸಳೆಗಳು ಯಾವಾಗ ಬೇಕಾದ್ರೂ ಹಾನಿ ಮಾಡ ಬಹುದು ಎಂಬ ಭಯಕ್ಕೆ ಇಲ್ಲಿನ ಜನರ ಜತೆಗೆ ಪ್ರವಾಸಿಗರು ಕೂಡಾ ಭಯಭೀತಿಯಲ್ಲಿದ್ದಾರೆ.
ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮೊಸಳೆ ಪಾರ್ಕ್ ಈಗ ಭಯದ ವಾತಾವರಣ ಸೃಷ್ಟಿಸುತ್ತಿದೆ. ಇಲ್ಲಿನ ಮೊಸಳೆಗಳ ದಾಳಿಗೆ ಜನರು ಭಯದ ನೆರಳಲ್ಲಿಯೇ ವಾಸಿಸುತ್ತಿರುವದಂತೂ ಸತ್ಯ.
Kshetra Samachara
01/09/2025 04:20 pm