ಹೊಸಪೇಟೆ : ಧರ್ಮಸ್ಥಳದ ಹೆಸರು ಕೆಡಿಸುವ ಷಡ್ಯಂತ್ರದಲ್ಲಿ ಕಾಂಗ್ರೆಸ್ ನೇರವಾಗಿ ಶಾಮೀಲಾಗಿದೆ. ಎನ್‌ಐಎ, ಅಥವಾ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆದರೇ ಮಾತ್ರ ಸತ್ಯಾಂಶ ಹೊರಬರಲಿದೆ ಅಂತ MLC ಸಿಟಿ ರವಿ ಹೇಳಿದರು.
ಹೊಸಪೇಟೆಯಲ್ಲಿ ಮಾತಾಡಿದ ಅವರು, 2023ರ ಜುಲೈನಲ್ಲೇ ಧರ್ಮಸ್ಥಳದ ವಿರುದ್ಧ ಷಡ್ಯಂತ್ರಕ್ಕೆ ಯೋಜನೆ ರೂಪಿಸಲಾಗಿತ್ತು. ಈ ಬಗ್ಗೆ ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಆದರೆ ಸರ್ಕಾರ ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಈ ಷಡ್ಯಂತ್ರದ ಕೇಂದ್ರ ಬಿಂದುವೇ ರಾಜ್ಯದ ಕಾಂಗ್ರೆಸ್ ಸರ್ಕಾರ ಅಂತ ಸ್ಪೋಟಕ ಹೇಳಿಕೆ ನೀಡಿದ್ರು.
ಧರ್ಮಸ್ಥಳದ ಕುರಿತ ಶ್ರದ್ಧೆಗೆ ಭಂಗ ತರುವುದೇ ಕೆಲವು NGOಗಳ ಉದ್ದೇಶ. ಆ ಮೂಲಕ ಮತಾಂತರಕ್ಕೆ ಪ್ರಯತ್ನಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ನೀವು ಸೌಜನ್ಯ ಪರವೋ, ಹೆಗ್ಗಡೆ ಪರವೋ ಅಂತ ಬಿಜೆಪಿಯನ್ನ ಕೇಳಿ ಹೆಗ್ಗಡೆಯವರನ್ನು ತಂದು ನಿಲ್ಲಿಸಿದ್ದಾರೆ. ಇದು ಬಹುದೊಡ್ಡ ಅಪರಾಧ. ಯೂಟ್ಯೂಬರ್ ಸಮೀರ್, ಹೆಗ್ಗಡೆ ಅವರ ರೇಖಾಚಿತ್ರ ಬಿಡಿಸಿ ಅಪಪ್ರಚಾರಕ್ಕೆ ಪ್ರಯತ್ನಿಸಿದ್ರು. ಒಂದು ವೇಳೆ ಅವರ ಧರ್ಮದ ಕುರಿತು ಹೀಗೆ ಮಾತಾಡಿದ್ದರೇ ಊರೂರು ಸುಟ್ಟು ಹೋಗಿರೋದು ಅಂತ ಸಿ.ಟಿ ರವಿ ಹೇಳಿದರು.
PublicNext
04/09/2025 10:46 pm