", "articleSection": "Infrastructure,WaterPower,Government", "image": { "@type": "ImageObject", "url": "https://prod.cdn.publicnext.com/s3fs-public/229640-1757151032-bng1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು ಜಲಮಂಡಳಿ ಪಿಜಿ ಮಾಲೀಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದು,ಅಪಾರ್ಟ್‌ಮೆಂಟ್‌ ಮತ್ತು ಪಿಜಿಗಳ ನೀರಿನ ದರ ಇಳಿಕೆ ಮಾಡಿದೆ.ಏಪ್ರಿಲ್‌ನಲ್ಲಿ ಹ...Read more" } ", "keywords": "Bengaluru PG owners, Bengaluru Water Board news, Bengaluru PG accommodation, Karnataka Water Board update, Bengaluru good news PG owners, Bengaluru latest news, Water Board benefit PG owners, PG owners news Bengaluru, Karnataka Bengaluru updates, Bengaluru breaking news", "url": "https://dashboard.publicnext.com/node" } ಬೆಂಗಳೂರು: ಪಿಜಿ ಮಾಲೀಕರಿಗೆ ಜಲ ಮಂಡಳಿಯಿಂದ ಗುಡ್ ನ್ಯೂಸ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಿಜಿ ಮಾಲೀಕರಿಗೆ ಜಲ ಮಂಡಳಿಯಿಂದ ಗುಡ್ ನ್ಯೂಸ್

ಬೆಂಗಳೂರು ಜಲಮಂಡಳಿ ಪಿಜಿ ಮಾಲೀಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದು,ಅಪಾರ್ಟ್‌ಮೆಂಟ್‌ ಮತ್ತು ಪಿಜಿಗಳ ನೀರಿನ ದರ ಇಳಿಕೆ ಮಾಡಿದೆ.ಏಪ್ರಿಲ್‌ನಲ್ಲಿ ಹೆಚ್ಚಿಸಿದ್ದ ದರವನ್ನು ಬಿಡಬ್ಲ್ಯೂಎಸ್‌ಎಸ್‌ಬಿಯಿಂದ ಪರಿಷ್ಕರಣೆ ಮಾಡಲಾಗಿದೆ.

2,000 ಮನೆಗಳಿಗಿಂತ ಕಡಿಮೆ ಇರುವ ವಸತಿ ಸಮುಚ್ಚಯಗಳಿಗೆ ನೀರಿನ ದರವನ್ನು ಇಳಿಕೆ ಮಾಡಿರುವ ಜಲಮಂಡಳಿ,ಪಿಜಿಗಳ ಸ್ವಚ್ಛತಾ ಶುಲ್ಕವನ್ನು ಶೇ.60ರಷ್ಟು ಕಡಿತಗೊಳಿಸಿದೆ.200 ಫ್ಲ್ಯಾಟ್‌ಗಳಿಗಿಂತ ಕಡಿಮೆ ಇರುವ ವಸತಿ ಸಮುಚ್ಚಯಗಳಲ್ಲಿ0-200 ಲೀಟರ್‌ವರೆಗೆ ₹25 , 200-500 ಕಿ.ಲೀ.ವರೆಗೆ ₹28 , 500-1000 ಕಿ.ಲೀ.ವರೆಗೆ ₹32 ,1000 ಕಿ.ಲೀ.ಗೂ ಮೇಲ್ಪಟ್ಟು ಬಳಕೆಗೆ ₹55 ದರ ನಿಗದಿ ಮಾಡಿದೆ.

ಪಿಜಿ ಮಾಲೀಕರ ಸಂಘದ ಮನವಿ ಮೇರೆಗೆ ಸ್ವಚ್ಛತಾ ಶುಲ್ಕವನ್ನು ಶೇ.60ರಷ್ಟು ಕಡಿತಗೊಳಿಸಲಾಗಿದೆ.

20 ಕೊಠಡಿಗಳನ್ನು ಹೊಂದಿರುವ ಪಿಜಿಗಳಿಗೆ ಇಷ್ಟು ದಿನ ನಿಗದಿಪಡಿಸಿದ್ದ ₹5000 ಮಾಸಿಕ ಶುಲ್ಕವನ್ನು, ಇದೀಗ 2000 ರೂಪಾಯಿಗೆ ಇಳಿಕೆ ಮಾಡಲಾಗಿದೆ. 20ಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿರುವ ಪಿಜಿಗಳಿಗೆ,ಇಷ್ಟು ದಿನ ಮಾಸಿಕ ಶುಲ್ಕ ₹7500 ಇತ್ತು.ಈ ಮಾಸಿಕ ಶುಲ್ಕ ₹7500 ರಿಂದ ₹ 3000 ಇಳಿಕೆ ಮಾಡಲಾಗಿದೆ. ಇನ್ನು ಗೃಹ ಬಳಕೆಯೇತರ ನೀರು ಸರಬರಾಜು ಹೊಂದಿರುವ ಹಾಸ್ಟೆಲ್‌ಗಳಿಗೆ ನಿಗದಿ ಪಡಿಸಿದ್ದ ₹5000 ಮಾಸಿಕ ಶುಲ್ಕವನ್ನು ₹3000 ಕಡಿತಗೊಳಿಸಲಾಗಿದ್ದು,ಪಿಜಿ ಮಾಲೀಕರು ಖುಷ್ ಆಗಿದ್ದಾರೆ.

Edited By : Manjunath H D
PublicNext

PublicNext

06/09/2025 03:00 pm

Cinque Terre

14.87 K

Cinque Terre

0

ಸಂಬಂಧಿತ ಸುದ್ದಿ