", "articleSection": "Health & Fitness,Cultural Activity", "image": { "@type": "ImageObject", "url": "https://prod.cdn.publicnext.com/s3fs-public/474799-1757211142-NEWS-05.5.01_45_21_07.Still031.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಗೋಳ : ಗರ್ಭಿಣಿಯರು ಅನುಭವಿಸುವ ನೋವು ಮತ್ತು ದೈಹಿಕ ಶಾರೀರಿಕ ಬದಲಾವಣೆಗಳು ಪುನರ್ಜನ್ಮಕ್ಕೆ ಸಮ ಎಂದು ಗೌರವಾನ್ವಿತ ಸಿವಿಲ್ ನ್ಯಾಯಾಧೀಶರು, ...Read more" } ", "keywords": "kundagol, pregnant women pain, equal to rebirth, judge gayatri statement, motherhood struggle, social message, kundagol news, kannada headline ", "url": "https://dashboard.publicnext.com/node" }
ಕುಂದಗೋಳ : ಗರ್ಭಿಣಿಯರು ಅನುಭವಿಸುವ ನೋವು ಮತ್ತು ದೈಹಿಕ ಶಾರೀರಿಕ ಬದಲಾವಣೆಗಳು ಪುನರ್ಜನ್ಮಕ್ಕೆ ಸಮ ಎಂದು ಗೌರವಾನ್ವಿತ ಸಿವಿಲ್ ನ್ಯಾಯಾಧೀಶರು, ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯರಾದ ಶ್ರೀಮತಿ ಗಾಯತ್ರಿ ಅವರು ಹೇಳಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಯೋಜನಾಧಿಕಾರಿಗಳ
ಕಾರ್ಯಾಲಯದಲ್ಲಿ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಿಡಿಪಿಓ ಇಲಾಖೆ ನೇತೃತ್ವದಲ್ಲಿ ವಿಶ್ವ ಪೌಷ್ಟಿಕಾಂಶ ದಿನಾಚರಣೆಯ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ 'ಗರ್ಭಿಣಿಯರು ತಮ್ಮ ದೇಹದೊಳಗೆ ಬೆಳೆಯುವ ದೇಹಕ್ಕೆ ಜೀವ ತುಂಬುತ್ತಾರೆ.
ಅವಧಿಯಲ್ಲಿ ಗರ್ಭಿಣಿಯರ ದೇಹದಲ್ಲಿ ಸ್ಥಾನ ಪಲ್ಲಟವಾಗುತ್ತವೆ, ಈ ಬದಲಾವಣೆಯ ನೋವು ಗರ್ಭಾವಸ್ಥೆಯಲ್ಲಿ ಅರಿವಿಗೆ ಬರುವುದಿಲ್ಲ, ಆದರೆ ಹೆರಿಗೆಯಾದ ನಂತರ ಅದರ ಪರಿಣಾಮ ಗೊತ್ತಾಗುತ್ತದೆ.
ಈ ಕಾರಣದಿಂದಲೇ ಹೆರಿಗೆ ಹೆಣ್ಣಿಗೆ ಪುನರ್ಜನ್ಮಕ್ಕೆ ಸಮ ಎಂದರು.
ಬಳಿಕ ಪೌಷ್ಟಿಕಾಂಶ ಶಿಬಿರವನ್ನು ನೋಡಿ ಗರ್ಭಿಣಿ ಮಹಿಳೆಯರಿಗಾಗಿ ಮಾಡಿಟ್ಟ ಆಹಾರಗಳನ್ನು ವೀಕ್ಷಿಸಿ, ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶಣ ಮಾಡಸಿ, ಗರ್ಭಿಣಿಯರಿಗೆ ಸೀಮಂತ ನೇರವೆರಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಒ ಉಮಾ ಬಳ್ಳೂಳ್ಳಿ, ವಕೀಲರಾದ ಬಿ.ಸಿ.ಪಾಟೀಲ, ವೈ.ಬಿ. ಬಿಳೇಬಾಳ, ಚಂದ್ರಕಲಾ ಪ್ರಭಾಕರ್, ಗೀತಾ ಜಿ., ಎಸ್.ಎಸ್.ತೊಂಡೂರ, ಅಶೋಕ ಕ್ಯಾರಕಟ್ಟಿ, ವೈ.ಎಂ. ತಹಶೀಲ್ದಾರ ಹಾಗೂ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
07/09/2025 07:42 am