", "articleSection": "Health & Fitness", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/88689_1757262670_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "7892371901" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ : ಈದ್ ಮಿಲಾದ್ ಹಬ್ಬದ 1500ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಧಾರವಾಡದ ಅಂಜುಮನ್ ಸಂಸ್ಥೆಯು ವಿಶಿಷ್ಟ ಕಾರ್ಯಕ್ರಮವೊಂದನ್ನು ಆಯೋಜ...Read more" } ", "keywords": "Dharwad record blood donation drive 1500 participants Blood donation camp in Dharwad sets new record", "url": "https://dashboard.publicnext.com/node" } ಧಾರವಾಡ : 1500 ಜನರಿಂದ ದಾಖಲೆಯ ರಕ್ತದಾನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : 1500 ಜನರಿಂದ ದಾಖಲೆಯ ರಕ್ತದಾನ

ಧಾರವಾಡ : ಈದ್ ಮಿಲಾದ್ ಹಬ್ಬದ 1500ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಧಾರವಾಡದ ಅಂಜುಮನ್ ಸಂಸ್ಥೆಯು ವಿಶಿಷ್ಟ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಮಾದರಿ ಎನಿಸಿದೆ.

ಹೌದು! ಈದ್ ಮಿಲಾದ್ ಹಬ್ಬದ ಅಂಗವಾಗಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅಧ್ಯಕ್ಷತೆಯಲ್ಲಿ 1500 ಜನರಿಂದ ರಕ್ತದಾನ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ ಸ್ವತಃ ಇಸ್ಮಾಯಿಲ್ ತಮಟಗಾರ, ಕಾಂಗ್ರೆಸ್ ಹಿರಿಯ ಮುಖಂಡರಾದ ದೀಪಕ ಚಿಂಚೋರೆ ಸಹ ರಕ್ತದಾನ ಮಾಡಿದರು. ಒಟ್ಟು 1500 ಜನ ದಾಖಲೆಯ ರೀತಿಯಲ್ಲಿ ರಕ್ತದಾನ ಮಾಡಿ ಮಾದರಿ ಎನಿಸಿದರು.

ಇದರ ಜೊತೆಗೆ ಉಚಿತ ಆರೋಗ್ಯ ಶಿಬಿರವನ್ನೂ ಏರ್ಪಡಿಸಲಾಗಿತ್ತು. ಈ ಆರೋಗ್ಯ ಶಿಬಿರದಲ್ಲಿ ಎಲ್ಲ ರೀತಿಯ ಆರೋಗ್ಯವನ್ನು ತಪಾಸಣೆ ನಡೆಸಿ ಉಚಿತವಾಗಿಯೇ ಔಷಧಿಗಳನ್ನು ವಿತರಣೆ ಮಾಡಲಾಯಿತು. ಇದರ ಜೊತೆಗೆ ಕಣ್ಣಿನ ತಪಾಸಣೆ ಕೂಡ ಮಾಡಿ ಈದ್ ಮಿಲಾದ್ ಹಬ್ಬವನ್ನು ಅಂಜುಮನ್ ಸಂಸ್ಥೆಯು ವಿಶಿಷ್ಟ ಮತ್ತು ವಿನೂತನ ರೀತಿಯಲ್ಲಿ ಆಚರಿಸಿದ್ದು ವಿಶೇಷವಾಗಿತ್ತು.

Edited By : PublicNext Desk
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/09/2025 10:01 pm

Cinque Terre

30.99 K

Cinque Terre

10

ಸಂಬಂಧಿತ ಸುದ್ದಿ