ಬೆಂಗಳೂರು: ರಾತ್ರಿ ಸುರಿದ ಮಳೆಯಿಂದ ನಗರದ ಕೆಲ ಭಾಗದ ಜನರು ರಾತ್ರಿ ಇಡೀ ಜಾಗರಣೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.ರಾಜಾಜಿನಗರ ಮಂಜುನಾಥನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ರಾತ್ರಿ ಇಡೀ ಪರದಾಡಿದ್ದಾರೆ. ನೆಲಮಹಡಿಯಲ್ಲಿದ್ದ ಮನೆಯ ಕಿಚನ್, ಹಾಲ್‌ಗಳಿಗೆ ಚರಂಡಿ ಮಿಶ್ರಿತ ನೀರು ನುಗ್ಗಿದೆ. ಈ ನೀರನ್ನು ಮನೆಯಿಂದ ಹೊರಹಾಕಲು ರಾತ್ರಿ ಇಡೀ ಒದ್ದಾಡಿದ್ದಾರೆ. ಮಳೆ ನೀರು ಸುಗಮವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದ ಹಿನ್ನೆಲೆ ಈ ರೀತಿಯ ಸಮಸ್ಯೆ ಸೃಷ್ಟಿಯಾಗಿದೆ.
Kshetra Samachara
07/09/2025 12:04 pm