", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/474799-1757343714-yutube1920.02_31_33_15.Still3745.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArujunChitradruga" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ಜಿಲ್ಲಾಸ್ಪತ್ರೆಯ ಕಚೇರಿ ಸಿಬ್ಬಂದಿ 50% ಅಧಿಕ ಪ್ರಮಾಣದಲ್ಲಿ ರಜೆ ಹಾಕಿ ಟ್ರಿಪ್‌ಗೆ ಹೋಗಿದ್ದ ವಿಚಾರಕ್ಕೆ ಕೆಡಿಪಿ ಸಭೆಯಲ್ಲಿ ಜಿಲ್...Read more" } ", "keywords": "chitradurga, district hospital staff, mass leave, protest action, district surgeon warning, healthcare disruption, chitradurga news, kannada headline ", "url": "https://dashboard.publicnext.com/node" }
ಚಿತ್ರದುರ್ಗ: ಜಿಲ್ಲಾಸ್ಪತ್ರೆಯ ಕಚೇರಿ ಸಿಬ್ಬಂದಿ 50% ಅಧಿಕ ಪ್ರಮಾಣದಲ್ಲಿ ರಜೆ ಹಾಕಿ ಟ್ರಿಪ್‌ಗೆ ಹೋಗಿದ್ದ ವಿಚಾರಕ್ಕೆ ಕೆಡಿಪಿ ಸಭೆಯಲ್ಲಿ ಜಿಲ್ಲಾ ಸರ್ಜನ್‌ಗೆ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಶ್ವಾಸ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಸ್ಪತ್ರೆಯ ಕಚೇರಿ ಸಿಬ್ಬಂದಿ ರಜೆ ವಿಚಾರ ಪ್ರತಿಧ್ವನಿಸಿದೆ. ಜಿಲ್ಲಾ ಸರ್ಜನ್ ರವೀಂದ್ರಗೆ ಅದೇಗೆ ನೀವು ಮನಸ್ಸಿಗೆ ಬಂದಂತೆ ಸಿಬ್ಬಂದಿಗೆ ರಜೆ ನೀಡಿದ್ರಿ.? ಸ್ವಂತ ಕೆಲಸ ಅಂತಾ ಹೇಳಿ ಅವ್ರು ಟ್ರಿಪ್‌ಗೆ ಹೋದ್ರಾ...? ಸಿಬ್ಬಂದಿ ರಜೆ ಚೀಟಿಗಳನ್ನು FSL ಗೆ ಕಳಿಸಿ. ವರದಿ ಬಂದ ಮೇಲೆ ತಪ್ಪಿತಸ್ಥರು ಅಂತಾ ಗೊತ್ತಾದ್ರೆ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕ್ತೀನಿ. ಇಂಥವೆಲ್ಲ ಬಹಳ ನೋಡಿದೀನಿ ಎಂದು ಜಿಲ್ಲಾ ಸರ್ಜನ್ ವಿರುದ್ಧ ಆಮ್ಲಾನ್ ಆದಿತ್ಯ ಬಿಶ್ವಾಸ್ ಗರಂ ಆದ್ರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿಶ್ವಾಸ್ ಗರಂ ಆಗುತ್ತಲೇ ಡಾ. ಡಿ. ಎಸ್. ರವೀಂದ್ರ ಕಕ್ಕಾಬಿಕ್ಕಿಯಾದರು.
Kshetra Samachara
08/09/2025 08:31 pm